ಕೋಟೆಕಾರ್ : ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಕ್ರೀಡೆಗಳಲ್ಲಿ ಭಾಗವಹಿಸುವವರು ಕ್ರೀಡಾ ಮನೋಬಾವದಿಂದ ಆಡಿದರೆ ಮುಂದೆ ಉನ್ನತ ಮಟ್ಟದ ಕ್ರೀಡಾ ಪಟುವಾಗಿ ಹೊರೆಹೊಮ್ಮಲು ಸಾಧ್ಯ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಕೋಟೆಕಾರ್ ಮಾಡೂರು ಗೋಲ್ಡನ್ ಕ್ರಿಕೆಟರ್ಸ್ ಬೆಳ್ಳಿ ಹಬ್ಬದ ಪ್ರಯುಕ್ತ ಮಾಡೂರಿನಲ್ಲಿ ನಡದ ಸೌಹಾರ್ದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿವೃತ ಯೋದರಾದ ಸದಾಶಿವ ಶೆಟ್ಟಿ, ತಾರನಾಥ ಪೂಜಾರಿ, ಕೃಷಿಕರಾದ ನಾರಾಯಣ ರೈ ಕೊಂಡಾಣಗುತ್ತು, ನಾರಾಯಣ ಪೂಜಾರಿ ಸೋವೂರು ಮತ್ತು ಗೋಲ್ಡನ್ ಕ್ರಿಕೆಟರ್ಸ್ ಅಧ್ಯಕ್ಷ ಬಶೀರ್ ಮಾಡೂರು ಅವರನ್ನು ಸನ್ಮಾನಿಸಲಾಯಿತು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಅಂಚನ್, ಕೋಟೆಕಾರ್ ವಲಯ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಗಾಂಭೀರ್, ಕೋಟೆಕಾರ್ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಶೆಟ್ಟಿ ಮಾಡೂರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿ ಸಲೀಮ್ ಮೆಗಾ ಅಸೈಗೋಳಿ, ಸಂಕೊಳಿಗೆ ಭಗವತಿ ಶಾಲೆಯ ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ಶೇಖ್ ಹಸನ್ ಸಾಹೇಬ್, ಉದ್ಯಮಿ ಕೆ.ಪಿ.ಸುರೇಶ್, ಐತಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಬೆಳ್ಳಿ ಹಬ್ಬದ ಪ್ರಯುಕ್ತ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಅಳೇಕಲ ಸ್ಪೋರ್ಟಿಂಗ್ಸ್ ತಂಡ ಚಾಂಪಿಯನ್ ಆಯಿತು. ಟೀಮ್ ಎಲಿಜೆಂಟ್ ಮಂಗಳೂರು ತಂಡ ದ್ವಿತೀಯ ಸ್ಥಾನ ಪಡೆಯಿತು. ಅಬ್ದುಲ್ ಅಝೀಝ್ ಮಾಡೂರು ಸ್ವಾಗತಿಸಿದರು. ಶರೀಪ್ ಮಾಡೂರು ವಂದಿಸಿದರು. ರಶೀದ್ ಮಾಡೂರು ಕಾರ್ಯಕ್ರಮ ನಿರೂಪಿಸಿದರು.