ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿದ ಅಧೀನ ಸಂಸ್ಥೆ ನಿಟ್ಟೆ ಉಷಾ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸೋಮವಾರ ನಡೆಯಿತು.
“ಥಿಂಕ್ ಈಖ್ವಲ್, ಬಿಲ್ಟ್ ಸ್ಮಾರ್ಟ್, ಇನ್ನೊವೇಟ್ ಫಾರ್ ಚೇಂಜ್” ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಿತು.ನಿಟ್ಟೆ ವಿವಿಯ ಸಂಶೋಧನೆ ವಿಭಾಗ ನಿರ್ದೇಶಕಿ ಪ್ರೊಫೆಸರ್ ಡಾ. ಇಂದ್ರಾಣಿ ಕರುಣಾಸಾಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತದಲ್ಲಿ ಮತ್ತು ವಿದೇಶದಲ್ಲಿ ಲಿಂಗ ಸಮಾನತೆಯ ಕುರಿತು ವಿವರಿಸಿ, ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಮಹಿಳೆಯ ಸಮಾನತೆಗಾಗಿ ಹೇಗೆ ಹೋರಾಡಬೇಕು ಎಂದು ತಿಳಿಸಿದರು.ಸ್ವೀಡನ್ ನ ಗೊಥೆನ್ ಬರ್ಗ್ ವಿವಿಯ ಸಂಶೋಧನಾ ವಿದ್ಯಾರ್ಥಿ ಜೋಸ್ಟಿನ್ ಹಾಗೂ ಇಂಗ್ಲೆಂಡ್ ನ ಪ್ಲೈ ಮೌತ್ ವಿವಿಯ ಡಾ. ಎಲೆನಾ ಉಪಸ್ಥಿತರಿದ್ದರು.
ಮುಖ್ಯ ಗ್ರಂಥಪಾಲಕಿ ಜಾನವಿ ಸ್ವಾಗತಿಸಿದರು. ಅಕೌಂಟೆಂಟ್ ಶ್ವೇತಾ ನಿರೂಪಿಸಿದರು. ಕಂಪ್ಯೂಟರ್ ಸಹಾಯಕ ಕಂಪ್ಯೂಟರ್ ಸಹಾಯಕಿ ಅಶ್ವಿನಿ ವಂದಿಸಿದರು. ಬೋಧನೆ ಮತ್ತು ಬೋಧನಾ ಸಿಬ್ಬಂದಿಗಳು ಮಹಿಳಾ ಘಟಕದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡರು.