UN NETWORKS
ಉಳ್ಳಾಲ: ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸೇರಿಸುವ ಪ್ರಯತ್ನದಲ್ಲಿ ಭಾಷಾವಿಷಯಕವಾದ ಶಾಸ್ತ್ರಗ್ರಂಥಗಳು ಹಾಗೂ ಪದಕೋಶಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಿಟ್ಟೆ ವಿವಿ ತುಳುಭಾಷಾ ಪೀಠ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಅವರ ಐದು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಹೊರತಂದಿರುವ ತುಳುಜ್ಞಾತಿ ಪದಕೋಶ ಸಂಶೋದನಾಸಕ್ತರಿಗೆ ಹಾಗೂ ಅಧ್ಯಯನ ನಡೆಸುವವರಿಗೆ ಬಹಳ ಉಪಯುಕ್ತವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತುಳುಜ್ಞಾತಿ ಪದಕೋಶದ ಸಂಪಾದಕರಾದ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಉಪಸ್ಥಿತರಿದ್ದರು.
ತುಳು ಭಾಷೆಯ ಆರು ನಿಘಂಟು ರಚನೆಯ ಸಂದರ್ಭದಲ್ಲಿ ಅದರಲ್ಲಿ ತೊಡಗಿಸಕೊಂಡಿದ್ದ ಹಿನ್ನೆಲೆಯಲ್ಲಿ ನಮಗೆ ನಿಘಮಟು ರಚನೆ ಕಷ್ಟವಾಗಲಿಲ್ಲ. ಮೂಲತ: ಕಾಸರಗೋಡಿನವನಾಗಿರುವುದರಿಂದ ಮಲಯಾಳಂ ಚೆನ್ನಾಗಿ ಗೊತ್ತಿತ್ತು. ಸ್ನಾತಕೋತ್ತರ ಪದವಿ ಶಿಕ್ಷಣ ಮದರಾಸಿನಲ್ಲಿ ಅಧ್ಯಯನ ಮಾಡಿದ್ದರಿಂದ ತಮಿಳು ಭಾಷೆಯ ಮೇಲೆ ಹಿಡಿತವಿತ್ತು. ತುಳು, ಕನ್ನಡ, ಇಂಗ್ಲಿಷ್ ಹೇಗೂ ಗೊತ್ತಿತ್ತು. ನಿಘಂಟು ರಚನೆಗೆ ಬಹಳ ಸಹಾಯವಾಯಿತು. ತುಳು ಅಕಾಡೆಮಿ, ವಿವಿಧ ವಿಶ್ವವಿದ್ಯಾಲಯಗಳು, ಭಾಷಾ ತಜ್ಞರನ್ನು ಸಂಪರ್ಕಿಸಿ ಅವರ ಜೊತೆಗೆ ಚರ್ಚಿಸಿ ಪುಸ್ತಕ ರಚಿಸಿದ್ದೇವೆ. 7064ಮುಖ್ಯ ಪದಗಳಿದ್ದು 37300ಕ್ಕೂ ಹೆಚ್ಚು ಜ್ಞಾತಿಪದಗಳಿಗೆ ಅರ್ಥ ನೀಡಲಾಗಿದೆ. ಎಲ್ಲ ಭಾಷೆಯ ಮೂಲಪ್ರತಿ ಓದಿಯೇ ಸಿದ್ಧಪಡಿಸಲಾಗಿದೆ. ತುಳು ಭಾಷಾ ನಿಗಮಟು ಪುಸ್ತಕದಲ್ಲಿರುವ ಲೋಪ ಇಲ್ಲಿ ತೆಗದಿದ್ದೇವೆ. ಕನಿಷ್ಠ 15ವರ್ಷಗಳು ಹಿಡಿಯಬೇಕಿದ್ದ ಜ್ಞಾತಿಪದಕೋಶದ ಕಾರ್ಯವನ್ನು ಕೇವಲ ಐದಉ ವರ್ಷದಲ್ಲಿ ಮುಗಿಸಿದ್ದೇವೆ. ತುಂಬ ಸಂತಸ ಕೊಟ್ಟಿದೆ.
ಡಾ. ಪದ್ಮನಾಭ ಕೇಕುಣ್ಣಾಯ
ತುಳುಜ್ಞಾತಿಪದಕೋಶ ತುಳುವರಿಗೆ ಮಾತ್ರವಲ್ಲ, ಇಡೀ ದ್ರಾವಿಡ ಕುಟುಂಬಕ್ಕೆ ಉಪಯುಕ್ತವಾಗಲಿದ್ದು ತುಳುವಿನಲ್ಲಿ ಯಾವುದೇ ಕೆಲಸಗಳನ್ನು ಮಾಡುವಾಗ ಮುಖ್ಯವಾಗಿ ಅದರ ಸಹೋದರಿ ಭಾಷೆಗಳಾದ ಕನ್ನಡ, ಕೊಡವ, ಮಲಯಾಳ, ಬ್ಯಾರಿ, ತಮಿಳು ಮತ್ತು ತೆಲುಗು ಭಾಷೆಗಳ ಅರಿವು ಅನಿವಾರ್ಯ. ಅಂತಹ ಸಂದರ್ಭದಲ್ಲಿ ತುಳುಪದಗಳಿಗೆ “ತುಳು ಜ್ಞಾತಿ ಪದಕೋಶ’ ಉಪಯುಕ್ತವಾಗಿದ್ದು ಭಾಷೆಯ ಜ್ಞಾನ ಹಾಗೂ ಸೊಬಗನ್ನು ಅರಿಯಲು ಸಹಕಾರಿಯಾಗಲಿದೆ. ಒಂದೇ ಮೂಲದಿಂದ ಹೊರಬಂದ ಭಾಷೆಗಳಲ್ಲಿ ಬಳಕೆಯಾಗುವ ಪದಗಳು ಒಂದೇ ಮೂಲದ್ದಾಗಿದ್ದು ಭಾಷೆಗಳ ಬಳಕೆಯ ಸಂದರ್ಭದಲ್ಲಿ ಉಚ್ಛಾರಣೆ ಹಾಗೂ ಬಳಕೆಯ ಬಗೆಯಲ್ಲಿ ವ್ಯತ್ಯಾಸ ಇದೆ. ಪ್ರಸ್ತುತ ತುಳು ಜ್ಞಾತಿಪದ ಸಂಚಯದಲ್ಲಿ ತುಳುಪದವನ್ನು ಮುಖ್ಯವಾಗಿ ಇರಿಸಿಕೊಂಡು ಅದಕ್ಕೆ ತುಳು, ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಅರ್ಥವಿವರಣೆ ಕೊಟ್ಟು ಬಳಿಕ ಕ್ರಮಾಗತವಾಗಿ ಕನ್ನಡ, ಕೊಡವ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಜ್ಞಾತಿಪದಗಳನ್ನು ಮತ್ತು ಅರ್ಥಗಳನ್ನು ಕೊಡಲಾಗಿದೆ. ಹವ್ಯಕ, ಕನ್ನಡ, ಮೋಯ, ಮಲಯಾಳಂ ಹಾಗೂ ಅಳಿವಂಚಿನಲ್ಲಿರುವ ಬೆಳಾರಿ ಹಾಗೂ ಕೊರಗ ಭಾಷೆಗಳ ಪದಗಳನ್ನು ಯಥಾ ರೀತಿ ಬಳಸಿಕೊಳ್ಳಲಾಗಿದೆ. 2ಪರಿಶಿಷ್ಠ 14ಅನುಬಂಧಗಳಿವೆ. ಮುಖ್ಯ ಉಲ್ಲೇಖ ಅದರ ಪ್ರಬೇಧಗಳನ್ನು ಪರಿಷ್ಕೃತ ಕನ್ನಡ ಮತ್ತಗು ಪರಿಷ್ಕೃತ ರೋಮನ್ ಲಿಪಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರತಿಭಾಷೆಯ ಆಡುನುಡಿಯ ಉಚ್ಛಾರಕ್ಕರೆ ಆಸ್ಪದೆ ನೀಡದೆ ಭಾಷೆಯ ಲಿಪಿಯಲ್ಲಿರುವಂತೆ ದಾಖಲಿಸಲಾಗಿದೆ. 1300ಪುಟಗಳಿದ್ದು 2.5ಕೆ. ಜಿ. ಭಾರವಿದೆ. ವಿವಿಧ ಆಕಾರದ ಫಾಂಟ್ ಬಳಸಲಾಗಿದೆ. ತುಳುಪದಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅರ್ಥ ಕೊಡಲಾಗಿದೆ. ಪದಸಂಚಯದಲ್ಲಿ ಜ್ಞಾತಿಪದಗಳನ್ನು ಹುಡಕಲು ಸುಲಭವಾಗುವಂತೆ ಏಳು ಅನುಸೂಚಿ ಪಟ್ಟಿಗಳನ್ನು ಆರಂಭದಲ್ಲಿಯೇ ನೀಡಲಾಗಿದೆ. ಪದಕೋಶವನ್ನು ಮುಂದಿನ ದಿನಗಳಲ್ಲಿ ಆನ್‍ಲೈನ್‍ನಲ್ಲಿ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ಇಡೀ ಪ್ರಪಂಚಕ್ಕೆ ತುಳುಭಾಷೆಯ ಸಾರ ಪಸರಿಸುವ ಪ್ರಯತ್ನ ನಡೆಯಲಿದೆ.
ಡಾ. ಸಾಯಿಗೀತಾ
ಸಂಪಾದಕರು