UN NETWORKS
ಉಳ್ಳಾಲ: ಸೋಮೇಶ್ವರ ಗ್ರಾಮ ದಾರಂದಬಾಗಿಲು ಪಿಲಾರ್ ಯುವಕ ಮಂಡಲದ 44ನೇ ವಾರ್ಷಿಕೋತ್ಸವ, ಪಿಲಾರ್ ಶ್ರೀಪಂಜದರಾಯ ದೈವದ ನೇಮೋತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮಾತನಾಡಿ ನಮ್ಮ ನಂಬಿಕೆಗಳನ್ನು ತಿಳಿದುಕೊಳ್ಳಬೇಕು. ಆಚಾರ ವಿಚಾರಗಳ ಸತ್ಯಾಂಶಗಳನ್ನು ಅರಿತು ಅದನ್ನು ನಮ್ಮ ಮಕ್ಕಳಿಗೆ ಕಲಿಸುವ ಕೆಲಸ ಆಗಬೇಕು ಎಂದು ಸಮಾಜಸೇವೆ, ಪೊಲೀಸ್ ಇಲಾಖೆ ಮತ್ತು ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿದರು.ಪೊಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರಕುಮಾರ್ ಗಟ್ಟಿ, ಪಿ.ಎ. ಇಂಜಿನಿಯರ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಯತೀಶ್ ಹೊಸಗದ್ದೆ, ಕಾರ್ಗಿಲ್ ಯೋಧರಾದ ಪ್ರವೀಣ್ ಶೆಟ್ಟಿ ಮೇಗಿನಮನೆ, ಯುವ ಉದ್ಯಮಿ ರಘುರಾಮ ಶೆಟ್ಟಿ ಪಿಲಾರ್, ಮಂಗಳೂರು ವಿಶ್ವ ವಿದ್ಯಾಲಯದ ಸಹಾಯಕ ಪ್ರಾದ್ಯಾಪಕಿ ಡಾ. ಭಾರತಿ ಪಿಲಾರ್, ಬಬ್ಬುಕಟ್ಟೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಿಲಾರ್ ಯುವಕ ಮಂಡಲದ ಕಾರ್ಯದರ್ಶಿ ಜಿತೇಶ್ ಗಟ್ಟಿ,ಕೋಶಧಿಕಾರಿ ಯಶವಂತ್ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಾರ್ದಿಕ ಪಿಲಾರ್ ಪ್ರಾರ್ಥನೆಗೈದರು. ಪಿಲಾರ್ ಯುವಕ ಮಂಡಲದ ಅಧ್ಯಕ್ಷ ರಜನಿಕಾಂತ್ ಪಂಡಿತ್ ಸ್ವಾಗತಿಸಿದರು. ಕೃಷ್ಣ ಪೊನ್ನುತ್ತೋಡು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.