Site icon Ullalavani

ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಸಂಸ್ಕೃತಿಯ ಮೇಳೈಕೆ : ಮಾಧವ ಮಾವೆ

UN NETWORKS

ಅಸೈಗೋಳಿ: ಅಯ್ಯಪ್ಪ ಸ್ವಾಮಿ ಮಂದಿರ ಇರುವ ಊರಿನಲ್ಲಿ ಒಂದು ರೀತಿಯ ನೆಮ್ಮದಿ, ಶಾಂತಿಯ ಜೊತೆ ಪ್ರದೇಶದಲ್ಲಿ ಶಕ್ತಿಯೂ ತುಂಬಿರುತ್ತದೆ. ಭಜನೆಯಿಂದಾಗಿ ಸಂಸ್ಕೃತಿಯೂ ಮೇಳೈಸುತ್ತದೆ ಎಂದು ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷ ಮಾಧವ ಮಾವೆ ಅಭಿಪ್ರಾಯಪಟ್ಟರು.ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಮಾತನಾಡಿ, ಗ್ರಾಮದಲ್ಲಿ ಹೆಚ್ಚು ಜನಸಂಖ್ಯೆ ಇರುವುದು ಅಸೈಗೋಳಿಯಲ್ಲಾಗಿದೆ. ಇಲ್ಲಿನ ಜನರ ನೆಮ್ಮದಿಗಾಗಿ ಅತ್ಯಗತ್ಯವಾ ಮಂದಿರ ಎಲ್ಲರ ಸಹಕಾರದಿಂದ ಎದ್ದು ನಿಂತಿದೆ. ಆಮಂತ್ರಣ ಪತ್ರಿಕೆ ದೊಡ್ಡ ಶಕ್ತಿಯಾಗಿದ್ದು ಪ್ರತಿಯೊಬ್ಬರಿಗೂ ತಲುಪಿದಾಗ ಬ್ರಹ್ಮಕಲಶ ಅದ್ಧೂರಿಯಾಗಿ ನಡೆಸಲು ಸಾಧ್ಯ ಎಂದರು.
ಕೊಣಾಜೆಯ ಮಾಜಿ ಪಟೇಲ್ ರಘುರಾಮ ಕಾಜವ ಉದ್ಘಾಟಿಸಿದರು. ಧಾರ್ಮಿಕ ಮುಖಂಡ ಸೀತಾರಾಮ ಶೆಟ್ಟಿ ದಡಸ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಚಂದ್ರಶೇಖರ ಮಂಟಮೆ, ಉದ್ಯಮಿ ದೇವಣ್ಣ ಶೆಟ್ಟಿ, ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಪ್ರಶಾಂತ್ ಕಾಜವ, ಉದ್ಯಮಿ ಮಂಜುನಾಥ ಸಾಮಾನಿ, ಇಂಜಿನಿಯರ್ ರವೀಂದ್ರ ಬಂಗೇರ ಕೊಣಾಜೆ ಮುಖ್ಯ ಅತಿಥಿಗಳಾಗಿದ್ದರು. ಪದಾಧಿಕಾರಿಗಳಾದ ಸಂಕಪ್ಪ ಕರ್ಕೇರ, ವಿಶ್ವನಾಥ ನಾಯಕ್, ರಾಮಕೃಷ್ಣ ಪಟ್ಟೋರಿ ಉಪಸ್ಥಿತರಿದ್ದರು.
ಸಲಹೆಗಾರ ತ್ಯಾಗಂ ಹರೇಕಳ ಸ್ವಾಗತಿಸಿದರು. ಸಮಿತಿಯ ಸಂಚಾಲಕ ಶ್ರೀನಿವಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಕಕ್ಕೆಮಜಲು ವಂದಿಸಿದರು. ಆನಂದ ಕೆ.ಅಸೈಗೋಳಿ ಕಾರ್ಯಕ್ರಮ ನಿರೂಪಿಸಿದರು.

`ಸ್ಥಳೀಯರ ಹಲವು ವರ್ಷಗಳ ಕನಸಾಗಿದ್ದ ಅಯ್ಯಪ್ಪ ಸ್ವಾಮಿ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ಪ್ರತಿಯೊಂದು ಮನೆಗೂ ತಲುಪಿಸಬೇಕಿದ್ದು ಈ ಕಾರ್ಯದಲ್ಲಿ ಯುವಸಮುದಾಯ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಿದೆ’
ಶ್ರೀನಿವಾಸ ಶೆಟ್ಟಿ ಪುಲ್ಲು, ಜೀರ್ಣೋದ್ಧಾರ ಸಮಿತಿಯ ಸಂಚಾಲಕ

Exit mobile version