UN NETWORKS
ಕುರ್ನಾಡು : ಹೊರೆಕಾಣಿಕೆ ಮೆರವಣಿಗೆ ಹಿಂದುತ್ವದ ಶಕ್ತಿಯಾಗಿ, ಇನ್ನೊಂದು ಧರ್ಮಕ್ಕೂ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಅತ್ಯಂತ ಅದ್ದೂರಿಯಾಗಿ ನಡೆದು ಇತಿಹಾಸ ಸೃಷ್ಟಿಯಾಗುವಂತೆ ಭಕ್ತರು ನೋಡಿಕೊಳ್ಳಬೇಕಾಗಿದ್ದು, ಅಂದಿನ ದಿನ ಯಾವುದೇ ಕೆಲಸವಿದ್ದರೂ ರಜೆ ತೆಗೆದುಕೊಳ್ಳಬೇಕಾಗಿದೆ ಎಂದು ಹೊರೆಕಾಣಿಕೆ ಸಮಿತಿ ಸಂಚಾಲಕ ಸಂತೋಷ್ ರೈ ಬೋಳಿಯಾರ್ ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಜಯರಾಮ ಸಾಂತ ಬೋಳ್ಯಾರುಗುತ್ತು ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಸೇರಿದ ಭಕ್ತರನ್ನು ಕಂಡಾಗ ಯಶಸ್ಸು ಖಚಿತ. ಯುವಕರು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಆಮಂತ್ರಣ ಪತ್ರಿಕೆಯಲ್ಲಿ ಇರುವವರು ನಿಮಿತ್ತ. ಪ್ರತಿಯೊಬ್ಬರೂ ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಸಮಿತಿಯ ಪ್ರಮುಖರಾದ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ಗುಣಕರ ಆಳ್ವ ಯಾನೆ ರಾಮ ರೈ ಬೋಳ್ಯಾರ್ ಗುತ್ತು, ಸುದರ್ಶನ ಶೆಟ್ಟಿ ಕುರ್ನಾಡುಗುತ್ತು, ನರಸಿಂಹ ಹೆಗ್ಡೆ ಕುರ್ನಾಡುಗುತ್ತು, ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ಜಗದೀಶ್ ಆಳ್ವ ಸುಜೀರುಗುತ್ತು,, ಅಶೋಕ ಭಂಡಾರಿ ಪಟೇಲ್ ಮನೆ, ಪುರುಷೋತ್ತಮ ಗಟ್ಟಿ ಗುಂಡ್ಯ, ಶಿವಶಂಕರ ಭಟ್ ಕಾಡಿಮಾರ್, ರಾಜೇಶ್ ಶೆಟ್ಟಿ ಪಜೀರುಗುತ್ತು, ಕೆ.ಆರ್.ಗಟ್ಟಿ ಕೊರಂತೋಡಿ,ಪ್ರಶಾಂತ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ ವಂದಿಸಿದರು. ರವಿ ರೈ ಪಜೀರ್ ಕಾರ್ಯಕ್ರಮ ನಿರೂಪಿಸಿದರು.
`ಬ್ರಹ್ಮಕಲಶ ದೈವಸಾನಿಧ್ಯ ಹೆಚ್ಚಿಸುವ ಕೆಲಸ, ಈ ಕಾರ್ಯದ ಆರಂಭಿಕ ಉತ್ತಮ ರೀತಿಯಲ್ಲಿ ನಡೆದಾಗ ಕಾರ್ಯಕ್ರಮ ಸಂಪೂರ್ಣ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ’
ಟಿ.ಜಿ.ರಾಜಾರಾಮ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ