UN NETWORKS
ನರಿಂಗಾನ: ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯಿತಿನಲ್ಲಿ ಜಾಗೃತಿ ಜಾಥದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮಹಿಳಾ ಸಾಧಕಿಯರ ಸಂವಾದ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರುಗಳಾದ ಬೇಬಿ, ಹರಿಣಾಕ್ಷಿ, ಸೆಫಿಯಾ, ಉಷಾ, ಆದಿವಾಸಿ ಸಮುದಾಯದ ಗಿರಿಜಾ, ಬೇಬಿ ತಮ್ಮ ಕಾರ್ಯ ಸಾಧನೆ, ಸವಾಲುಗಳ ಅನುಭವಗಳನ್ನು ಹಂಚಿಕೊಂಡರು. ಅಂಗನವಾಡಿ ಮೇಲ್ವಿಚಾರಕಿ ಸಿಂಧೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಪಿ.ಡಿ.ಓ ರಜನಿ ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಮಹಿಳೆಯರ ಸಹಕಾರ ಕೋರಿದರು. ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಸದಸ್ಯರುಗಳಾದ ಅಬ್ದುಲ್ ಲತೀಫ್, ಅಬ್ದುಲ್ ರಹಿಮಾನ್, ಅಬ್ದುಲ್ ರಜಾಕ್ ಮಹಿಳಾ ಸಾಧಕಿಯರ ಮಾತುಗಳನ್ನು ಆಲಿಸಿ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ನೀಡಿದರು. ಸಂವಾದ ನಿರ್ವಹಿಸಿದ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ಮಹಿಳೆಯರು ಜಾಗೃತರಾಗಿ ತಮ್ಮ ವೈಯುಕ್ತಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾ ಶೋಷಣೆಮುಕ್ತ, ತಾರತಮ್ಯಮುಕ್ತ, ತ್ಯಾಜ್ಯಮುಕ್ತ, ಆದರ್ಶ ಕುಟುಂಬ, ಮಾದರಿ ಗ್ರಾಮ ನಿರ್ಮಾಣ ಕಾರ್ಯದ ನೇತೃತ್ವ ವಹಿಸಲು ಸಿದ್ಧರಾಗಬೇಕೆಂದರು. ಮಹಿಳಾ ದಿನಾಚರಣೆಯ ಕುರಿತು ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕೃಷ್ಣ ಮೂಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಯೋಜಕಿ ಕಾವೇರಿ ಮಹಿಳಾ ಜಾಗೃತಿ ಗೀತೆ ಹಾಡಿದರು. ಸಂಯೋಜಕ ಚೇತನ್ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆಯರು ರೋಶನಿ ನಿಲಯ, ಸೈಂಟ್ ಆಲೋಶಿಯಸ್ ಸಮಾಜ ಕಾರ್ಯ ಕಾಲೇಜಿನ ವಿದ್ಯಾರ್ಥಿಗಳು ಸಂಯೋಜನೆಗೆ ಸಹಕರಿಸಿದರು.