UN NETWORKS
ಉಳ್ಳಾಲ : ವಿಕಲಚೇತನರಿಗೆ ಸ್ವಾವಲಂಬಿ ಜೀವನ ನಡೆಸಲು ದ್ವಿಚಕ್ರ ವಾಹನ ಪೂರಕವಾಗಿದ್ದು, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಇನ್ನಷ್ಟು ವಿಕಲಚೇತನ ಯುವಜನರನ್ನು ಸರ್ವೇ ನಡೆಸಿ ಅವರಿಗೆ ದ್ವಿಚಕ್ರ ವಾಹನ ಪೂರೈಸಲು ಬದ್ಧನಾಗಿದ್ಧೆನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಜಬ್ಬಾರ್ ಬೋಳಿಯಾರ್, ಮುಖಂಡರಾದ ಸುರೇಶ್ ಭಟ್ನಗರ, ದಿನೇಶ್ ಕುಂಪಲ, ಆಹಮ್ಮದ್ ಬಾವ ಕೊಟ್ಟಾರ, ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯ, ನಾಗೇಶ್ ಶೆಟ್ಟಿ ತೊಕ್ಕೊಟ್ಟು, ಕೌನ್ಸಿಲರ್‍ಗಳಾದ ಬಾಝಿಲ್ ಡಿ.ಸೋಜ, ಭಾರತಿ, ರವಿಚಂದ್ರ ಗಟ್ಟಿ, ಆಯೂಬ್ ಮಂಚಿಲ, ದೀಕ್ಷಿತಾ, ವೀಣಾ ಡಿ.ಸೋಜ, ಮಹಮ್ಮದ್ ಮುಕ್ಕಚ್ಚೇರಿ, ಶಶಿಕಲಾ, ಬಶೀರ್, ಜಬ್ಬಾರ್, ಮಮತಾ, ಮಾಜಿ ಕೌನ್ಸಿಲರ್ ಗಳಾದ ಪೊಡಿಮೋನು, ಮಹಮ್ಮದ್ ಮುಸ್ತಾಫ, ರವಿ ಗಾಂಧಿನಗರ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ್ ಗಟ್ಟಿ ಬೋಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.