Site icon Ullalavani

ಉಳ್ಳಾಲ : ಅವಿವಾಹಿತೆ ಆತ್ಮಹತ್ಯೆ

UN NETWORKS

ಉಳ್ಳಾಲ: ಅವಿವಾಹಿತೆ ಮಹಿಳೆಯೋರ್ವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮುಳಿಹಿತ್ಲು ನಿವಾಸಿ ಸುಶೀಲಾ (48) ಆತ್ಮಹತ್ಯೆ ಮಾಡಿಕೊಂಡವರು. ತೊಕ್ಕೊಟ್ಟು ಅಂಬಾವನ ನಿವಾಸಿ ಸಹೋದರಿ ಮನೆಗೆ ಬುಧವಾರ ಬಂದಿದ್ದ ಅವರು ಇಂದು ಬೆಳಗ್ಗಿನಿಂದ ನಾಪತ್ತೆಯಾಗಿದ್ದರು. ಅವಿವಾಹಿತರಾಗಿದ್ದ ಸುಶೀಲಾ ಸಹೋದರಿ ಮನೆಗೆ ಆಗಾಗ್ಗ ಬಂದು ಹೋಗುತ್ತಿದ್ದರು. ಅವಿವಾಹಿತೆಯಾಗಿರುವ ಸುಶೀಲಾ ಅವರಿಗೆ ಆರೋಗ್ಯದ ಸಮಸ್ಯೆ ಇದ್ದುದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಡೆಸಿದ್ದಾರೆಂದು ಮನೆಮಂದಿ ತಿಳಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version