Site icon Ullalavani

ಚೆಂಬುಗುಡ್ಡೆ: ದಲಿತ ಕುಟುಂಬದ ಮನೆ ಬೆಂಕಿಗಾಹುತಿ

UN NETWORKS

ಉಳ್ಳಾಲ: ಚೆಂಬುಗುಡ್ಡೆ ರುದ್ರಭೂಮಿ ಸಮೀಪದ ದಿ.ಶೋಭಾ ಎಂಬವರ ಮನೆಯು ಬೆಂಕಿಗಾಹುತಿಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಶೋಭ ಅವರ ಪುತ್ರಿ ಅಂಕಿತರವರು ಮನೆಯಲ್ಲಿ ಇರದ ಸಂದರ್ಭದಲ್ಲಿ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಸಿದ್ದರು. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅನಾಹುತ ಸಂಭವಿಸರಬಹುದು ಎಂದು ಅಂದಾಜಿಸಲಾಗಿದೆ. ಶೋಭ ಅವರು ಕಳೆದ ಕೆಲವು ವರ್ಷದ ಹಿಂದೆ ನಿಧನರಾಗಿದ್ದು ಇಬ್ಬರು ಪುತ್ರಿಯರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಕಡುಬಡತನದಲ್ಲಿದ್ದ ಕುಟುಂಬ ಇದೀಗ ಮನೆಯನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ನಗರಸಭಾ ಸದಸ್ಯರಾದ ಬಾಝಿಲ್ ಡಿಸೋಜ ಹಾಗೂ ಶಶಿಕಲಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Exit mobile version