Site icon Ullalavani

ಮುಂದಿನ ಕೆಲವೇ ದಿನಗಳಲ್ಲಿ ಮುಡಿಪು ಆಗಲಿದೆ ಮಾದರಿ ಜಂಕ್ಷನ್ : ಸಚಿವ ಯು.ಟಿ ಖಾದರ್

UN NETWORKS

ಮುಡಿಪು : ಇನ್ಪೋಸಿಸ್ ಸೇರಿದಂತೆ ಕೈಗಾರಿಕಾ ವಲಯವನ್ನು ಸಂಪರ್ಕಿಸುವ ಮುಡಿಪು ಜಂಕ್ಷನ್ ಮಾದರಿ ಜಂಕ್ಷನ್ ಆಗಿ ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ಮುಡಿಪು ಸಾಂಬಾರ್ ತೋಟದಿಂದ ಮುಡಿಪು ಕಾಯರ್ ಗೋಳಿವರೆಗೆ ಇನ್ ಫೋಸಿಸ್ ಹಾಗೂ ಲೋಕೋಪಯೋಗಿ ಇಲಾಖೆ ಜಂಟಿ ಆಶ್ರಯದಲ್ಲಿ ಏಳೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಉಳ್ಳಾಲ ತಾಲೂಕು ಆಗಿ ಘೋಷಣೆಯಾದ ಹಿನ್ನಲೆಯಲ್ಲಿ ಮಂಗಳೂರು ಕ್ಷೇತ್ರ ಅಭಿವೃದ್ದಿಗೆ ಇನ್ನಷ್ಟು ಚಾಲನೆ ದೊರಕಿದ್ದು, ಈಗಾಗಲೇ ದೇರಳಕಟ್ಟೆಯಿಂದ ತೊಕ್ಕೊಟ್ಟುವರೆಗೆ 30 ಕೋಟಿ ರೂ. ವೆಚ್ಚದಲ್ಲಿ ರಸ್ತೆ ದ್ವಿಪಥ ಕಾಮಗಾರಿ ಅಭಿವೃದ್ದಿಯಲ್ಲಿದೆ. ಸೋಮೇಶ್ವರ ಮಾಡೂರು ರಸ್ತೆಯಾಗಿ ಮೆಲ್ಕಾರ್ ಸಂಪರ್ಕಿಸುವ ಲಿಂಕ್ ರಸ್ತೆ ಹೆದ್ದಾರಿ ಕಾಮಗಾರಿಯಡಿ ನಡೆಯಲಿದ್ದು, ಈ ರಸ್ತೆಯನ್ನು ಹೊರತುಪಡಿಸಿ ಉಳಿದ ಮುಖ್ಯರಸ್ತೆಗಳನ್ನು ಮೇಲ್ದರ್ಜೆಗೆ ರಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಇನ್ಫೋಸಿಸ್ ಮಾದರಿ ಕಾರ್ಯ : ಯಾವುದೇ ಪ್ರದೇಶದ ಅಭಿವೃದ್ದಿಯಲ್ಲಿ ಖಾಸಗಿ ಸಹಭಾಗಿತ್ವ ಇದ್ದಲ್ಲಿ ಅಭಿವೃದ್ಸಧಿ ಸಾಧಿಸಲು ಸಾಧ್ಯವಿದೆ ಎನ್ನುವುದನ್ನು ಇನ್ಫೋಸಿಸ್ ಸಂಸ್ಥೆ ಮಾಡಿ ತೋರಿಸಿದೆ. ಈಗಾಗಲೇ ಕಂಬಳಪದವಿನಿಂದ ಸಾಂಬಾರ್ ತೋಟವರೆಗೆ ದ್ವಿಪಥ ರಸ್ತೆ ಅಭಿವೃದ್ದಿ ಮಾಡಿ ಇದೀಗ. ವಿಶೇಷ ಕೋರಿಕೆಯ ಮೇರೆಗೆ ಸಾಂಬಾರ್ ತೋಟದಿಂದ ಕಾಯರ್ಗೋಳಿವರೆಗೆ ರಸ್ತೆ ದ್ವಿಪಥ ಮಾಡುವ ಕಾಮಾಗಾರಿಗೆ ಅನುದಾನ ನೀಡುವ ಮೂಲಕ ಮಾದರಿಯಾಗಿದೆ ಎಂದು ಸಚಿವ ಖಾದರ್ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಇನ್ ಫೋಸಿಸ್ ಸಂಸ್ಥೆಯ ಧೀರಜ್ ಹೆಜಮಾಡಿ, ಗೋಪಿ ಹಾಗೂ ಹರೀಶ್, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು, ಪಂಚಾಯಿತಿ ಸದಸ್ಯರುಗಳಾದ ನಝೀರ್ ಮೊಯ್ದಿನ್, ಇಮ್ತಿಯಾಝ್, ಫ್ಲೋರಿನಾ, ಸದಸ್ಯ ಹೈದರ್ ಕೈರಂಗಳ ಹಾಗೂ ನವೀನ್ ಪಾದಲ್ಪಾಡಿ, ನಾಸಿರ್ ನಡುಪದವು, ಪದ್ಮನಾಭ ನರಿಂಗಾನ, ಸಂಪರ್ಕಿಸುವ ಮುಡಿಪು ಜಂಕ್ಷನ್ ಮಾದರಿ ಜಂಕ್ಷನ್ ಆಗಿ ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ಮುಡಿಪು ಸಾಂಬಾರ್ ತೋಟದಿಂದ ಮುಡಿಪು ಕಾಯರ್ ಗೋಳಿವರೆಗೆ ಇನ್ಫೋಸಿಸ್ ನ ವತಿಯಿಂದ ಏಳೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

 

Exit mobile version