UN NETWORKS
ಉಳ್ಳಾಲ: ಕಡಲ ತಟ ಹಾಗೂ ಎತ್ತರದ ಬಂಡೆ ಮೇಲೆ ಇರುವ ಅಪರೂಪದ ದೇವಸ್ಥಾನವಾಗಿರುವ ಪುಣ್ಯಕ್ಷೇತ್ರ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನಕ್ಕೆ ಈ ಬಾರಿಯ ಮಹಾಶಿವರಾತ್ರಿಗೆ ಭಕ್ತರ ಅಭಿಪ್ರಾಯದಂತೆ ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದು ಕೃತಾರ್ಥರಾದರು.
ಸೋಮೆಶ್ವರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ನಿರೀಕ್ಷೆಯಂತೆ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದೆ. ಭಕ್ತರಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ವ್ಯವಸ್ಥೆ ಆಗಿದೆ. ಭಯ ಹುಟ್ಟಿಸಿ ಭಯ ಹೋಗಲಾಡಿಸಿ ಶಿವ ರಕ್ಷಣೆ ಮಾಡುತ್ತಾನೆ. ಭಕ್ತರ ಬಹುದಿನಗಳ ಕನಸಾಗಿರುವ ದೇವಸ್ಥಾನ ಸಂಪರ್ಕಿಸುವ ಸುಸಜ್ಜಿತ ರಸ್ತೆ ಉದ್ಘಾಟನೆಗೆ ಸಜ್ಜಾಗಿದೆ. 1.21ಕೋಟಿ ರೂ. ಗಳ ಸುಂದರವಾದ ಸಭಾಭವನ ಹಾಗೂ ಭಕ್ತರಿಗೆ ತಂಗಲು ಅನುಕೂಲವಾಗಲು ಯಾತ್ರೀ ಭವನವನ್ನು ಸಚಿವರು ಒದಗಿಸಿದ್ದಾರೆ. ಶ್ರೀಕ್ಷೇತ್ರದ ಭಕ್ತರಿಗೆ ಶ್ರೀ ಸೋಮನಾಥ ಆರೋಗ್ಯ ಕರುಣಿಸಲಿ.
ವಿಶ್ವನಾಥ ಗಟ್ಟಿ ವಗ್ಗ
ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ