UN NETWORKS
ಉಳ್ಳಾಲ : ಉಳ್ಳಾಲದ ಅಬ್ಬಕ್ಕ ಉತ್ಸವ ಸಮಿತಿ ಹಲವು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದ ಅಬ್ಬಕ್ಕ ಉತ್ಸವ ಹಲವು ಆರೋಪಗಳಿಂದ ಈ ಬಾರಿ ಸಮಿತಿ ಕೈತಪ್ಪಿ ಜಿಲ್ಲಾಡಳಿತ ಆಯೋಜಿಸಿದರೂ, ವೀರರಾಣಿ ಅಬ್ಬಕ್ಕಳ ಹೆಸರಿನಲ್ಲಿ ನಡೆದ ಕಾರ್ಯಕ್ರಮ ಹಿಂದಿನಂತೆಯೇ ಪ್ರೇಕ್ಷಕರಿಲ್ಲದೆ ಕಳೆಗುಂದಿತು. ಆದರೆ ಉಳ್ಳಾಲ ಕಡಲತೀರದಲ್ಲಿ ಆಯೋಜಿಸಿದ್ದ ಬೀಚ್ ಉತ್ಸವಕ್ಕೆ ಜನ ಮುಗಿಬಿದ್ದು ಯಶಸ್ವಿಯಾಗಿ ನಡೆಯಿತು.
ಅಧಿಕಾರಿಗಳು-ಸ್ಥಳೀಯರಲ್ಲಿ ಸಂವಹನ ಕೊರತೆ : ನಿಗದಿತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದರೂ, ಸ್ವಯಂ ಸೇವಕರ ಕೊರತೆಯಿಂದ ಅಧಿಕಾರಿಗಳೇ ಹಲವೆಡೆ ಪೇಚಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಶಿಸ್ತಿನಿಂದ ಕಾರ್ಯಕ್ರಮಗಳು ನಡೆದರೂ, ಹಿಂದಿನ ಸಮಿತಿ ಆಯೋಜಿಸುತ್ತಿದ್ದ ಕಾರ್ಯಕ್ರಮದ ಅಬ್ಬರ ಇಂದು ಕಾಣಲಿಲ್ಲ. ವೇದಿಕೆಯಲ್ಲಿಯೂ ಬೆರಳೆಣಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಭಾಗವಹಿಸಿ ಅಬ್ಬಕ್ಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಆದರೆ ಸ್ಥಳೀಯಾಡಳಿತದ ಸದಸ್ಯರಾಗಲಿ, ಹಿರಿಯರನ್ನಾಗಲಿ , ಸ್ಥಳೀಯ ಜನಪ್ರತಿನಿಧಿಗಳಿಗೆ ಮನ್ನಣೆಯೇ ನೀಡದೆ ಕಾರ್ಯಕ್ರಮ ಮಂಗಳೂರಿನ ಅಧಿಕಾರಿಗಳಿಗೆ ಮಾತ್ರ ಸೀಮಿತವಾದಂತಿತ್ತು.
ಬೀಚ್ ಉತ್ಸವ ಯಶಸ್ವಿ : ಉಳ್ಳಾಲ ಕಡಲತೀರದಲ್ಲಿ ಜೋಕಾಲಿ, ಟೊರೆಟೊರೊ, ಡ್ರ್ಯಾಗನ್, ತೂಗುವ ತೊಟ್ಟಿಲುಗಳಲ್ಲಿ ಆಟಕ್ಕೆ ಜನ ಜಮಾಯಿಸಿದ್ದರು. ಸಂತೆ ವ್ಯಾಪಾರಿಗಳಿಗೂ ಉತ್ತಮ ವ್ಯಾಪಾರಗಳು ನಡೆದಿದೆ. ಏಳು ವರ್ಷಗಳ ಹಿಂದೆ ಉಳ್ಳಾಲದ ಮೊಗವೀರರು ನಡೆಸಿದಂತಹ ಬೀಚ್ ಉತ್ಸವದಂತೆಯೇ, ಇಂದು ನಡೆದ ಬೀಚ್ ಉತ್ಸವ ಯಶಸ್ವಿಯಾದರೂ,, ವೀರ ರಾಣಿ ಅಬ್ಬಕ್ಕಳ ಉತ್ಸವ ಯಶಸ್ವಿಯಾದಂತೆ ಮೇಲ್ನೋಟಕ್ಕೆ ಕಂಡುಬರಲಿಲ್ಲ.