Site icon Ullalavani

ವೀರ ರಾಣಿ ಅಬ್ಬಕ್ಕ ಉತ್ಸವ ಜನಪದ ದಿಬ್ಬಣಕ್ಕೆ ಚಾಲನೆ

UN NETWORKS

ಉಳ್ಳಾಲ: ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಉಳ್ಳಾಲದಲ್ಲಿ ನಡೆಯುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವ-2019ಕ್ಕೆ ಜನಪದ ದಿಬ್ಬಣಕ್ಕೆ ಉಳ್ಳಾಲ ಭಾರತ್ ಪ್ರೌಢಶಾಲಾ ವಠಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ದಿಬ್ಬಣದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು.

ಬಳಿಕ ಮಾತನಾಡಿದ ಸಚಿವರು ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಬಹುದಿನಗಳಿಂದ ಸಿದ್ಧತೆ ನಡೆಸಿದ್ದು ಉತ್ಸವ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಜನಪದ ದಿಬ್ಬಣದಲ್ಲಿ ವೀರ ರಾಣಿ ಅಬ್ಬಕ್ಕನ ಟ್ಯಾಬ್ಲೋ ಮತ್ತು ಚೆಂಡೆ, ಕೊಡೆ, ಕೀಲುಕುದುರೆ, ದಫ್, ಕೊರಗರ ಗಜ ಕುಣಿತ, ಹಾಲಕ್ಕಿ ಕುಣಿತ, ವೀರಗಾಸೆ, ಪೂಜಾ ಕುಣಿತ, ಕಂಗೀಲು, ಯಕ್ಷಗಾನ ವೇಷ ಪ್ರದರ್ಶನ ಮೂಲಕ ಮೆರವಣಿಗೆ ಸಾಗಿತು.ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಸಾಗಿತು. ಮೆರವಣಿಗೆ ಉಳ್ಳಾಲ ಬೀಚ್ ತನಕ ಮುಂದುವರಿಯಿತು.

ಇದೇ ಮೊದಲ ಬಾರಿಗೆ ಮೊಗವೀರ ಸಮುದಾಯ ಬಾಂಧವರು ಅಬ್ಬಕ್ಕನ ಸೇನಾಧಿಪತಿ ಚೆನ್ನಮರಕಲನ ವೇಷ ಧರಿಸಿ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಅಬ್ಬಕ್ಕ ಸರ್ಕಲ್ ಮೂಲಕ ಬೀಚ್ ನತ್ತ ಸಾಗುವ ಮೂಲಕ ಮೆರವಣಿಗೆಯ ಕಳೆ ಹೆಚ್ಚಸಿದರು.

Exit mobile version