Site icon Ullalavani

ಸಮುದ್ರಪಾಲಾಗುತ್ತಿದ್ದವನ ರಕ್ಷಿಸಿದ ಜೀವರಕ್ಷಕರು

UN NETWORKS

ಉಳ್ಳಾಲ: ಉಳ್ಳಾಲ:ಸಮುದ್ರಪಾಲಾಗುತ್ತಿದ್ದ ಪ್ರವಾಸಿಗನನ್ನು ಸ್ಥಳೀಯ ಜೀವರಕ್ಷಕ ಸದಸ್ಯರು ರಕ್ಷಿಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ.

ಬೆಂಗಳೂರು ದೇವನಹಳ್ಳಿ ನಿವಾಸಿ ದಿಲೀಪ್ ಎಂಬವರ ಪುತ್ರ ದೀಪು .ಡಿ (28) ರಕ್ಷಿಸಲ್ಪಟ್ಟ ವರು.ಬೆಂಗಳೂರಿನಿಂದ ಆರು ಮಂದಿಯ ತಂಡ ಭಾನುವಾರ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ತಂಡ ಸಂಜೆ ಹೊತ್ತಿಗೆ ಸೋಮೇಶ್ವರ ಸಮುದ್ರ ಕಿನಾರೆಗೆ ಬಂದಿಳಿದು, ಸಮುದ್ರ ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಅಲೆಯೊಂದಕ್ಕೆ ಸಿಲುಕಿದ ದೀಪು ಸಮುದ್ರ ಪಾಲಾಗುತ್ತಿದ್ದಂತೆ ಸಮುದ್ರ ತೀರದಲ್ಲೇ ಇದ್ದ ಮೂವರು ಜೀವರಕ್ಷಕರು ಕೂಡಲೇ ಸಮುದ್ರಕ್ಕೆ ಧುಮುಕಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಯಲ್ಲಿ ಜೀವರಕ್ಷಕರಾದ ಅಶೋಕ್, ಮೋಹನ್ ಮತ್ತು ಶ್ಯಾಂಸುಂದರ್ ಪಾಲ್ಗೊಂಡಿದ್ದರು.

Exit mobile version