Site icon Ullalavani

ಕಾಮಗಾರಿ ನಿರ್ದೇಶಿತ ಪ್ರದೇಶದಲ್ಲಿ ನಡೆಸದಿದ್ದಲ್ಲಿ ಉಗ್ರ ಪ್ರತಿಭಟನೆ : ಸಂತೋಷ್ ಕುಮಾರ್ ರೈ ಬೋಳಿಯಾರ್

UN NETWORKS

ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರತಿಕಾರವಾಗಿ ಸೋತ ವಾರ್ಡ್‍ಗಳ ಅಭಿವೃದ್ಧಿ ಕಾಮಗಾರಿಯನ್ನು ಬೇರೆಡೆ ವರ್ಗಾಯಿಸುವ ಮೂಲಕ ಸಚಿವ ಯು.ಟಿ. ಖಾದರ್ ಅಭಿವೃದ್ಧಿಯಲ್ಲೂ ರಾಜಕೀಯ ನಡೆಸುತ್ತಿದ್ದು, ಮಂಜೂರಾಗಿರುವ ಕಾಮಗಾರಿಗಳನ್ನು ನಿರ್ದೇಶಿತ ಪ್ರದೇಶಗಳಲ್ಲಿ ನಡೆಸದಿದ್ದಲ್ಲಿ ಉಳ್ಳಾಲ ನಗರಸಭೆಯ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಎಚ್ಚರಿಸಿದ್ದಾರೆ.

ಉಳ್ಳಾಲ ನಗರಸಭಾ ಕ್ಷೇತ್ರದಲ್ಲಿ ನಗರೊತ್ಥಾನದಿಂದ ಕೆರೆಬೈಲ್ ವಾರ್ಡ್‍ನ ಕೆರೆಬೈಲ್ ಅಜ್ಜನಕಟ್ಟೆಯಿಂದ ಕಲ್ಲಾಪು ಸಂಪರ್ಕ ರಸ್ತೆಯ ಅಭಿವೃದ್ಧಿಗೆಂದುಮೀಸಲಿಟ್ಟಿದ್ದ 60 ಲಕ್ಷ ರೂ. ಅನುದಾನವನ್ನು ನಗರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆ ಜಂಕ್ಷನ್‍ನಿಂದ ಮುಕ್ಕಚ್ಚೇರಿ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಬದಲಾವಣೆಯನ್ನು ವಿರೋ„ಸಿ ಶುಕ್ರವಾರ ಬಿಜೆಪಿ ಮತ್ತು ಕೆರೆಬೈಲ್ ನಿವಾಸಿಗಳ ಜಂಟಿಯಾಗಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೆರೆಬೈಲ್ ವಾರ್ಡ್‍ನಲ್ಲಿ ಬಿಜೆಪಿ ಸದಸ್ಯ ಆಯ್ಕೆಯಾಗಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇಲ್ಲಿನ ಕಾಮಗಾರಿಗಳನ್ನು ವರ್ಗಾಹಿಸಲಾಗಿದೆ. ಇದೇ ರೀತಿ ಕಾಂಗ್ರೆಸ್ ಸೋತಿರುವ ಇತರ ವಾರ್ಡ್‍ಗಳ ಕಾಮಗಾರಿಗಳನ್ನು ಬದಲಾಯಿಸಿ ಉತ್ತಮ ಸ್ಥಿತಿಯಲ್ಲಿರುವ ರಸ್ತೆಗೆ ಬದಲಾಯಿಸುವ ಮೂಲಕ ಖಾದರ್ ಸಣ್ಣತನವನ್ನು ಪ್ರದರ್ಶಿಸಿದ್ದಾರೆ. ಓರ್ವ ಜನಪ್ರತಿನಿ„ಯಾಗಿ ಜನರ ಅವಶ್ಯಕತೆಯನ್ನು ಕಡೆಗಣಿಸಿರುವುದನ್ನು ಇಲ್ಲಿನ ಜನರು ಉಗ್ರವಾಗಿ ಪ್ರತಿಭಟಿಸಲಿದ್ದಾರೆ ಎಂದರು.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ವಾರ್ಡ್‍ಗಳ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿರುವ ಸಚಿವ ಯು.ಟಿ.ಖಾದರ್ ಜನರಿಗೆ ಮೋಸ ಮಾಡುತ್ತಿದ್ದು, ಈ ಹಿಂದೆ ಯಡಿಯೂರಪ್ಪ ಸರಕಾರ ನಗರಸಭೆಯ ಅಭಿವೃದ್ಧಿ ಮತ್ತು ಒಳಚರಂಡಿ ಯೋಜನೆಗೆ ಹಣ ಬಿಡುಗಡೆ ಮಾಡಿದರೂ ಆದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು, ಕ್ಷೇತ್ರಕ್ಕೆ ಸರಿಯಾದ ಕುಡಿಯುವ ನೀರು ಸರಬರಾಜು ಸೇರಿದಂತೆ ಮೂಲಭೂತ ಸೌಕರ್ಯ ನೀಡುವಲ್ಲಿ ವಿಫಲರಾಗಿದ್ದು, ಸಾಮಾಜಿಕ ನ್ಯಾಯ ಕೊಡಬೇಕಾಗಿದ್ದ ಸಚಿವರು ಕೋಟೆಕಾರಿನಲ್ಲಿ ಪರಿಶಿಷ್ಟ ವರ್ಗದ ಸದಸ್ಯನಿಗೆ ಅಧ್ಯಕ್ಷ ಪದವಿ ನೀಡಬೇಕಾಗಿತ್ತು ಆದರೆ ಅವರು ಅಧ್ಯಕ್ಷತೆ ನೀಡಲು ನಿರಾರಣೆ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದು ಇದಕ್ಕೆ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ 1ಯುಎ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ ಅಭಿವೃದ್ಧಿಯಲ್ಲಿ ಬೇದಬಾವ ಮಾಡುವುದಿಲ್ಲ ಎನ್ನುವ ಸಚಿವರು ಕೆರೆಬೈಲು ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿರುವ ವಾರ್ಡ್‍ಗಳ ಅಭಿವೃದ್ಧಿಯ ಅನುದಾನವನ್ನು ಯಾವ ಉದ್ಧೇಶದಿಂದ ಬದಲಾವಣೆ ಮಾಡಿದ್ದಾರೆ ಎನ್ನುವುದನ್ನು ಜನರಿಗೆ ಹೇಳಬೇಕು. ಯಾವುದೇ ಕ್ರಿಯಾ ಯೋಜನೆ ಬದಲಾವಣೆ ಮಾಡಬೇಕಾದರೆ ಅಲ್ಲಿ ಜನರ ಆಕ್ಷೇಪ ಅಥವಾ ತಾಂತ್ರಿ ತೊಂದರೆ ಇದ್ದರೆ ಮಾತ್ರ ಬದಲಾವಣೆಗೆ ಅವಕಾಶವಿದೆ. ಆದರೆ ಇಲ್ಲಿ ಯಾವ ಉದ್ಧೇಶದಿಂದ ಬದಲಾವಣೆ ಮಾಡಲಾಗಿದೆ ಎನ್ನುವುದನ್ನು ಜನರು ಪ್ರಶ್ನಿಸುತ್ತಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಕ್ಷೇತ್ರ ಪ್ರ. ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ನಗರಸಭಾ ಸದಸ್ಯ ರಾಜೇಶ್ ಯು.ಬಿ. , ಮುಖಂಡರಾದ ಜೀವನ್ ಕುಮಾರ್ ತೊಕ್ಕೊಟ್ಟು, ಹರಿಯಪ್ಪ ಸಾಲಿಯಾನ್, ಸುರೇಂದ್ರಶೆಟ್ಟಿ, ಪ್ರಶಾಂತ್ ಕಾಪಿಕಾಡ್, ಗಣೇಶ್ ಕಾಪಿಕಾಡ್, ಪುರುಷೋತ್ತಮ ಕಲ್ಲಾಪು,ದಯಾನಂದ ತೊಕ್ಕೊಟ್ಟು, ಸ್ಥಳಿಯರಾದ ನಾರಾಯಣ ಬಿ., ರೋಹಿತಾಕ್ಷ ಲೋಕೇಶ್ ಶೆಟ್ಟಿ, ಸತೀಶ್ ಚೆಂಬುಗುಡ್ಡೆ, , ಫ್ರಾನ್ಸಿಸ್ ಕೆರೆಬೈಲ್, ನಝೀರ್ ಕೆರೆಬೈಲ್, ಹಮೀದ್ ಕೆರೆಬೈಲ್, ಮಿನಾರ್ ಕೆರೆಬೈಲ್, ನಾಗೇಶ್ ಕೆರೆಬೈಲ್, ಪುಷ್ಪರಾಜ್ ಕೆರೆಬೈಲ್, ಪ್ರದೀಪ್ ಕೆರೆಬೈಲ್ ಉಪಸ್ಥಿತರಿದ್ದರು.

Exit mobile version