Site icon Ullalavani

ತಲಪಾಡಿ : ಟೋಲ್‍ಗೇಟ್‍ಗೆ ಸ್ಥಳೀಯರಿಂದ ಮುತ್ತಿಗೆ

UN NETWORKS

ತಲಪಾಡಿ: ಸರಕಾರಿ ಮಟ್ಟದಲ್ಲಿ ನಡೆದ ಸಭೆಯ ನಿಯಮ ಉಲ್ಲಂಘಿಸಿ ಸರಕಾರಿ ದಾಖಲೆಗಳನ್ನು ಕೇಳಿ ವಾಹನ ಸವಾರರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ತಲಪಾಡಿ ನಿವಾಸಿಗಳು ಶುಕ್ರವಾರ ತಲಪಾಡಿ ಟೋಲ್‍ಗೇಟ್‍ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರಿಗೆ ಟೋಲ್‍ಗೇಟ್‍ನಲ್ಲಿ ವಿನಾಯಿತಿ ನೀಡುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ ಚುನಾವಣಾ ಗುರುತು ಚೀಟಿ ಅಥವಾ ಆಧಾರ್ ಕಾರ್ಡ್ ಪರಿಗಣಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಟೋಲ್‍ಗೇಟ್‍ನಲ್ಲಿ ವಾಹನ ಪರವಾನಗಿ, ಚಾಲನಾ ಪರವಾನಿಗೆ ಕೇಳಿ ಕಿರುಕುಳ ನೀಡಲಾಗುತ್ತಿದೆ. ಅವೆರಡು ದಾಖಲೆಗಳನ್ನು ಕೇಳುವ ಅಧಿಕಾರ ಇರುವುದು ಸಂಬಂಧಪಟ್ಟ ಇಲಾಖೆಗೆ ಮಾತ್ರ. ನಕಲಿ ಆಧಾರ್ ಕಾರ್ಡ್ ಮತ್ತು ಗುರುತು ಚೀಟಿ ತೋರಿಸಿದರೆ ಠಾಣೆಗೆ ದೂರು ಕೊಡಿ. ಆದರೆ ಮುಂದೆ ಇಂತಹ ಪ್ರಕರಣ ನಡೆದರೆ ಆಗುವ ಅನಾಹುತಗಳಿಗೆ ಟೋಲ್‍ಗೇಟ್ ಅಧಿಕಾರಿಗಳೇ ಕಾರಣ ಎಂದು ದೂರಿದರು.

ಪ್ರತಿಭಟನೆಯಲ್ಲಿ ಹುಸೈನ್ ತಲಪಾಡಿ, ಶಬೀರ್ ಅಬ್ಬಾಸ್ ತಲಪಾಡಿ, ಸಂಶುದ್ದೀನ್ ಉಚ್ಚಿಲ್, ಬಿ. ಇಸ್ಮಾಯಿಲ್, ಮೂಸಾ ತಲಪಾಡಿ, ಹಮೀದ್ ಹಸನ್ ತಲಪಾಡಿ ಹಾಗೂ ಹರ್ಷದ್ ವರ್ಕಾಡಿ ಉಪಸ್ಥಿತರಿದ್ದರು. ಉಳ್ಳಾಲ ಪೊಲೀಸರು ರಕ್ಷಣೆ ಒದಗಿಸಿದ್ದರು.

Exit mobile version