UN NETWORKS
ತಲಪಾಡಿ : ತಾಜುಲ್ ಫುಖಹಾಹ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ರವರನ್ನು ತಲಪಾಡಿ ಬಿಲಾಲ್ ಜುಮಾ ಮಸೀದಿಯ ಖಾಝಿಯಾಗಿ ಸ್ವೀಕಾರಿಸುವ ಸಮಾರಂಭ ತಲಪಾಡಿ ಬಿಲಾಲ್ ಮಸೀದಿ ವಠಾರದಲ್ಲಿ ನಡೆಯಿತು.ಬಿಲಾಲ್ ಜುಮಾ ಮಸೀಯ ಖತೀಬ್ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ತಾಜುಶ್ಯರೀಅ ಉಸ್ತಾದುಲ್ ಅಸಾತೀದ್ ಎಂ.ಅಲಿ ಕುಂಞ ಉಸ್ತಾದ್ ಶಿರಿಯ ದುಅ ನೆರವೇರಿಸಿದರು.ಜಾಮಿಅ ಸ ಅದಿಯ್ಯ ಅರಬಿಯ್ಯಯ ಪ್ರಾಂಶುಪಾಲ ಕೆ.ಪಿ ಹುಸೈನ್ ಸ ಅದಿ ಕೆ.ಸಿ ರೋಡು ಮುಖ್ಯ ಪ್ರಭಾಷಣಗೈದರು.ದಾರುಸ್ಸಲಾಂ ಮದ್ರಸದ ಮುಹಲ್ಲೀಂಗಳಾದ ಮುಹಮ್ಮದ್ ಮಸೂದ್ ಬಾಹಸನಿ, ಅಶ್ರಫ್ ಮದನಿ, ಎಮ್ಮೆಸ್ಸೆಂ ಅಬ್ದುರ್ರಹ್ಮಾನ್ ಶಿಬಿಲಿ ಹಿಮಾಮಿ ಅಲ್-ಅಮಾನಿ, ಬಿಲಾಲ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಎಂ.ಸೀದಿಯಬ್ಬ ಹಾಜಿ, ಉಪಾಧ್ಯಕ್ಷ ಯಾಕೂಬ್.ಪಿ, ಕೋಶಾಧಿಕಾರಿ ಬಿ.ಎಸ್ ಮೊಹಿದ್ದೀನ್ ಕುಂಞ, ಕೆ.ಸಿ ರೋಡು ಅಲ್-ಮುಬಾರಕ್ ಮಸೀದಿ ಅಧ್ಯಕ್ಷ ಅಬ್ಬಾಸ್ ಕೊಳಂಗರೆ, ಉಚ್ಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಕೆ.ಸಿ ನಗರ ಅಲ್ ಹುದಾ ಜುಮಾಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಎಂ.ಜೆ.ಎಂ ಉಪಾಧ್ಯಕ್ಷ ಪಿ.ಐ ಅಹ್ಮದ್ ಕುಂಞ, ಎಸ್.ಎಂ.ಎ ತಲಪಾಡಿ ಅಧ್ಯಕ್ಷ ಅಬ್ಬಾಸ್ ಹಾಜಿ ಕೊಮರಂಗಳ,ಎಸ್ ವೈಎಸ್ ಕೆ.ಸಿ ರೋಡು ಸೆಂಟರ್ ಉಚಿತ ವಿವಾಹ ಸಮಿತಿ ಅಧ್ಯಕ್ಷ ಯು.ಬಿ ಮುಹಮ್ಮದ್ ಹಾಜಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಕೆ.ಎ ಉಸ್ಮಾನ್, ಮಸ್ಜಿದುಲ್ ಅನ್ಸಾರ್ ಖತೀಬ್ ಅಬೂಬಕ್ಕರ್ ಸಿದ್ದೀಕ್ ಮದನಿ, ಅಲ್ ಹಿದಾಯ ಜುಮಾ ಮಸೀದಿ ಅಧ್ಯಕ್ಷ ಎನ್.ಎಸ್ ಉಮರ್ ಮಾಸ್ಟರ್, ಮಾಡೂರು ಇಮಾದುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್ ಹಸನ್, ಬಟ್ಟಪ್ಪಾಡಿ ಖಿಳಿರಿಯ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಕಾಟುಂಗರಗುಡ್ಡೆ ಮು ಹಿಯ್ಯದ್ದೀನ್ ಮಸೀದಿ ಅಧ್ಯಕ್ಷ ಪಿ.ಎಚ್ ಅಬೂಬಕ್ಕರ್ ಹಾಜಿ, ಮಕ್ಯಾರ್ ತಾಜುಲ್ ಹುದಾ ಮಸೀದಿ ಅಧ್ಯಕ್ಷ ಝಕರಿಯಾ ಮಕ್ಯಾರ್, ಬಿಲಾಲ್ ಜುಮಾ ಮಸೀದಿಯ ಕಾರ್ಯದರ್ಶಿ ಅನ್ವರ್ ಸದಾತ್, ಸದಸ್ಯರಾದ ಮೊಹಿದ್ದೀನ್ ಕುಟ್ಟಿ, ಹಕೀಂ ಪೂಪಣ್ಣು, ಶರೀಫ್ ಮಕ್ಯಾರ್, ಮೂಸ ಕುಂಞ, ಅಬ್ದುಲ್ಲಾ ಪೂಮಣ್ಣ್ ಮುಂತಾದವರು ಈ ಸಂದರ್ಭಗಳಲ್ಲಿ ಉಪಸ್ಥಿತರಿದ್ದರು.
ತಲಪಾಡಿ ಬಿಲಾಲ್ ಜುಮಾ ಮಸೀದಿಯ ಇಮಾಂ ಹಸನ್ ಜಾಬಿರ್ ಫಾಳಿಲಿ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್.ಟಿ ವಂದಿಸಿದರು.