Site icon Ullalavani

ಕೋಟೆಪುರದಲ್ಲಿ ಬೃಹತ್ ರಕ್ತದಾನ ಶಿಬಿರ

UN NETWORKS

ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಉಳ್ಳಾಲ ವಲಯ. ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕ ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹ ಭಾಗಿತ್ವದೊಂದಿಗೆ ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರವನ್ನು ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ರಮ್ ಹಸನ್ ರವರು ಉದ್ಘಾಟಿಸಿದರು.

ಸರ್ವಕಾಲದಲ್ಲಿ ಜಾತಿ-ಮತ ಭೇದವಿಲ್ಲದೆ ವಿವಿಧ ಗ್ರೂಪ್‍ಗಳಿದ್ದು ಒಂದೇ ಬಣ್ಣದಿಂದ ಪರಿಚಯಿಸಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಅವಶ್ಯಕತೆಗೆ ತಕ್ಕಂತೆ ತನ್ನ ಮೂಲ ಸ್ವರೂಪದೊಂದಿಗೆ ಉಪಯೋಗವಾಗುವ ರಕ್ತವು ಒಂದು ಜೀವವನ್ನು ಉಳಿಸಬಲ್ಲದು. ಕಷ್ಟ ಕಾಲದಲ್ಲಿ ಒಂದು ಜೀವವನ್ನು ಉಳಿಸಿದರೆ ಅದು ಇಡೀ ಮನುಕುಲವನ್ನು ಉಳಿಸಿದಂತೆ ಎಂಬ ಕುರಾನಿನ ಧ್ಯೇಯ್ಯ ವಾಕ್ಯದಂತೆ ಸಂಘಟನೆಗಳು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ಜನಾಬ್ ಹಾಜಿ ಇಬ್ರಾಹಿಂ ಕೋಡಿಜಾಲ್‍ರವರು ಅಭಿಪ್ರಾಯ ವ್ಯಕ್ತಪದಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಜಮೀಯ್ಯತ್ತುಲ್ ಫಲಾಹ್‍ದ ಪ್ರಧಾನ ಕಾರ್ಯದರ್ಶಿ ಎಂ.ಹೆಚ್. ಮಲಾರ್, ಕೋಶಾಧಿಕಾರಿ ಕೆ.ಎಂ.ಕೆ ಮಂಜನಾಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಲಹೆಗಾರ ಮುಸ್ತಫ ಅಡ್ಡೂರು ದೆಮ್ಮೆಲೆ, ಉಳ್ಳಾಲ ನಗರ ಸಭೆಯ ಕೌನ್ಸಿಲರಾದ ಜನಾಬ್ ಇಕ್ಬಾಲ್ ಕೋಟೇಪುರ, ಜನಾಬ್ ರಮೀಝ್ ಕೋಡಿ, ಜನಾಬ್ ಅಸ್ಗರ್ ಅಲಿ, ಕೋಟೆಪುರ ಜುಮಾ ಮಸೀದಿ ಇದರ ಅಧ್ಯಕ್ಷರಾದ ಜನಾಬ್ ಯು.ಕೆ ಅಬ್ಬಾಸ್, ನಝೀರ್ ಕೋಡಿ, ಬ್ಲಡ್ ಹೆಲ್ಪ್ ಲೈನ್‍ನ ನಿರ್ವಾಹಕರಾದ ಜನಾಬ್ ಇಮ್ರಾನ್ ಮದಕ, ಜನಾಬ್ ಅಶ್ರಪ್ ಅರಬಿ ಕಲ್ಲಡ್ಕ ಉಪಸ್ಥಿತರಿದ್ದರು.

ಟಿಪ್ಪು ಸುಲ್ತಾನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು.

Exit mobile version