UN NETWORKS
ಸೋಮೇಶ್ವರ : ಸೋಮೇಶ್ವರ ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯಾಗಿ ನಾಗರಿಕರಿಗೆ ಇ.ವಿ.ಎಂ. ಮತ್ತು ವಿ.ವಿ. ಪ್ಯಾಟ್ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿವಿ ಪ್ಯಾಟ್ ಯಂತ್ರ ಕೈಕೊಟ್ಟರೆ?:ಮತದಾನ ಸಂದರ್ಭ ವಿವಿ ಪ್ಯಾಟ್ ಯಂತ್ರ ಕೈಕೊಟ್ಟರೆ ಅದನ್ನು ಮಾತ್ರ ಬದಲಾಯಿಸಲಾಗುತ್ತದೆ. ಒಂದು ವೇಳೆ, ನಿಯಂತ್ರಣ ಘಟಕ (ಸಿಯು) ಅಥವಾ ಮತದಾನ ಯಂತ್ರ (ಬಿಯು) ಕೈಕೊಟ್ಟರೆ ಮೂರು ಯಂತ್ರಗಳನ್ನು ಕೂಡ ಬದಲಾಯಿಸಲಾಗುತ್ತದೆ.ಮತದಾರರು ಅಥವಾ ಸಾರ್ವಜನಿಕರು ಮತಯಂತ್ರದ ಕಾರ್ಯನಿರ್ವಹಣೆ ಬಗ್ಗೆ ವಿನಾಕಾರಣ ಆರೋಪ ಮಾಡಿದರೆ ವಿಚಾರಣೆ ನಡೆಸುತ್ತಾರೆ. ಸುಳ್ಳು ಆರೋಪ ಮಾಡಿದ ವ್ಯಕ್ತಿಗೆ 6 ತಿಂಗಳ ಸಜೆ ಹಾಗೂ ಸಾವಿರ ರೂ. ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ. ಒಂದು ವೇಳೆ ಆರೋಪ ಸರಿಯಿದ್ದರೆ ಮತದಾನ ರದ್ದು ಮಾಡಿ, ಮರು ಮತದಾನ ನಡೆಸುವ ಅವಕಾಶ ಇದೆ.
ಸುಮಾರು 50 ಗ್ರಾಮಸ್ಥರು ಭಾಗವಹಿಸಿದ ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಸೋಮೇಶ್ವರ ಗ್ರಾಮ ಕರಣಿಕರಾದ ಲಾವಣ್ಯಾ ಕೆ., ಕಚೇರಿ ಸಿಬ್ಬಂದಿ ಗೋಪಾಲ್, ಸೋಮೇಶ್ವರ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಪಂಚಾಯತ್ ಸದಸ್ಯ ಬಶೀರ್, ಸೋಮೇಶ್ವರ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಶೀರ್ ಕೊಳಂಗರೆ ಸಹಿತ ಎಲ್ಲಾ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.