Site icon Ullalavani

ನೇತಾಜಿ ಸುಭಾಸ್ಚಂದ್ರ ಭೋಸ್ ಪ್ರೌಢ ಶಾಲೆಯಲ್ಲಿ ಅತ್ಯಾಧುನಿಕ ಕಲಿಕಾ ವಿಧಾನಕ್ಕೆ ಸಚಿವ ಯು.ಟಿ. ಖಾದರ್ ಚಾಲನೆ

UN NETWORKS

ದೇರಳಕಟ್ಟೆ : ರೌಂಡ್ ಟೇಬಲ್ ಇಂಡಿಯಾದ ಘಟಕವಾದ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190, ರಾಜ್ಯ ಸರಕಾರದ ಸಚಿವ ಯು.ಟಿ. ಖಾದರ್ ಅವರ ಶಾಸಕ ನಿಧಿ, ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಕ್ರೆಡಾಯ್ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆಯ ನೇತಾಜಿ ಸುಭಾಸ್ಚಂದ್ರ ಭೋಸ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿನೂತನ ಶೈಲಿಯಲ್ಲಿ ಶಿಕ್ಷಣ ನೀಡುವ ದೃಷ್ಟಿಯಲ್ಲಿ ಆರಂಭಿಸಲಾದ ಅತ್ಯಾಧುನಿಕ ಸೌಲಭ್ಯಗಳುಳ್ಳ ತರಗತಿ ಕೊಠಡಿ ಎಕ್ಸ್‍ಪೀರಿಯನ್ಸ್ ಎಜ್ಯುಕೇಶನ್ “ಆಡಿಯೋ ವಿಶ್ಯುಲ್ ರೂಂ’ ನ್ನು ಸಚಿವ ಯು.ಟಿ. ಖಾದರ್ ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ನೂತನ ಕಲಿಕಾ ವಿಧಾನ ಗ್ರಾಮೀಣ ಭಾಗದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರು ಕ್ಷೇತ್ರದ ಮಟ್ಟಿಗೆ ದೇರಳಕಟ್ಟೆಯ ಸರಕಾರಿ ಶಾಲೆಯಲ್ಲಿ ಆರಂಭಗೊಂಡಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ರೌಂಡ್ ಟೇಬಲ್ ಸಂಸ್ಥೆಯು ಮಣ್ಣಗುಡ್ಡೆಯ ಶಾಲೆಯೊಂದರಲ್ಲಿ ಇಂತಹ ವ್ಯವಸ್ಥೇ ಕಲ್ಪಿಸಿದ್ದು ನಮ್ಮ ಕ್ಷೇತ್ರದಲ್ಲೂ ಇಂತಹ ಒಂದು ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ರೌಂಡ್ ಟೇಬಲ್, ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಕ್ರೆಡಾಯ್ ಬಲು ದೊಡ್ಡ ಕೊಡುಗೆ ನೀಡಿದೆ ಎಂದರು.
ರೌಂಡ್ ಟೇಬಲ್ ಚೇರ್‍ಮೆನ್ ಆನಂದ ಭಂಡಾರ್ಕರ್ ಮಾತನಾಡಿ ನೂತನ ವ್ಯಸವಸ್ಥೆಯಡಿಯಲ್ಲಿ ಸಂಪೂರ್ಣ ಕಲಿಕಾ ಅನುಭವ ಸಿಗಲಿದೆ. ವಿಶಾಲವಾದ ಕೊಠಡಿ, ಶಬ್ಧ ಗ್ರಹಿಕೆಗೆ ಹಾಗೂ ಅತ್ಯುತ್ತಮ ವಿಡಿಯೋ ದೃಶ್ಯ, ತರಗತಿಗೆ ನಿರಂತರ ವಿದ್ಯುತ್ ಸರಬರಾಜು ಹಾಗೂ ಆನ್‍ಲೈನ್ ಮೂಲಕ ದೂರ ಶಿಕ್ಷಣ ಸೌಲಭ್ಯ ಹಾಗೂ ಹವಾ ನಿಯಂತ್ರಿತ ವ್ಯವಸ್ಥೆಗಳೊಂದಿಗೆ ಅತ್ಯುತ್ತಮ ಕಲಿಕಾ ಭರವಸೆಯನ್ನು ಒದಗಿಸಿಕೊಡುತ್ತದೆ ಎಂದರು.ಸಂಸ್ಥೆಯು ಶಿಕ್ಷಣದೊಂದಿಗೆ ಸ್ವಾತಂತ್ರ್ಯ ಎಂಬ ರಾಷ್ಟ್ರೀಯ ಕಾರ್ಯಕ್ರಮದೊಂದಿಗೆ ಭಾರತದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದಿದ್ದು ಅವರ ಜೀವನವನ್ನು ಸುಧಾರಿಸಿದೆ. ನೂತನ ವ್ಯವಸ್ಥೆಯಡಿಯಲ್ಲಿ ಎಲ್ಲ ವಯೋಮಾನದ ವಿದ್ಯಾರ್ಥಿಗಳಿಗೂ ಇದರಿಂದ ಪ್ರಯೋಜನವಾಗಲಿದೆ. ಇಂದಿನ ವಿದ್ಯಾರ್ಥಿ ಮುಖ್ಯವಾಗಿ ವಿಡಿಯೋ ಮೂಲಕ ಕಲಿಯುತ್ತಾರೆ ಮತ್ತು ಪಾಠವನ್ನು ವಿದ್ಯಾರ್ಥಿಗಳಿಗೆ ತಕ್ಷಣ ಗ್ರಹಿಸಲು ಸಹಕಾರಿಯಾಗಿದೆ ಎಂದರು. ಪ್ರಚಲಿತ ಪಠ್ಯಕ್ರಮದಂತೆ ನಮ್ಮ ಕಲಿಕಾ ವ್ಯವಸ್ಥೆಯ ಮುಖ್ಯ ಸವಾಲು ಅವಧಿ ಮೀರಿದ ಪಠ್ಯಕ್ರಮ, ಪಠ್ಯ ಪುಸ್ತಕ ಮತ್ತು ಮುದ್ರಣ ಆಧಾರಿತ ಕಲಿಕೆಯ ಸಮಯದಿಂದ ಕಷ್ಟ ಆಗುತ್ತಿರುವುದರಿಂದ ಈ ಪರಿಕಲ್ಪನೆಯು ಹೊಸ ಪ್ರಚಲಿತ ಪರಿಕಲ್ಪನೆಯೊಂದಿಗೆ ಕಲಿಸಲು ಸಾಧ್ಯವಾಗುತ್ತಿದೆ. ಶಿಕ್ಷಕರ ಅನುಪಸ್ಥಿತಿಯಲ್ಲೂ ವಿದ್ಯಾರ್ಥಿಗಳಿಗೆ ಕಲಿಯಲು ಸಾಧ್ಯವಿದೆ ಎಂದರು.

ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಪ್ರೊ. ಡಾ. ಅಮಿತಾ ಹೆಗ್ಡೆ, ಕ್ರೆಡಾಯ್ ಕಾರ್ಯದರ್ಶಿ ನವೀನ್ ಕಾರ್ಡೋಜ, ರೌಂಡ್ ಟೇಬಲ್‍ಚೇರ್ ಮಂಗಳೂರು ಘಟಕ ಸದಸ್ಯರಾದ ಸುಧೀಶ್ ಕರುಣಾಕರನ್, ನೆಯಿಲ್ ಝಕಾರಿಸ್, ನಿಶಾಂತ್ ಶೇಟ್, ಜಯರಾಜ್ ಶೆಟ್ಟಿ, ವಿಶಾಲ್ ಕೊಖಾನಿ, ನಿಹಾಲ್ ಶೆಟ್ಟಿ ಹಾಗೂ ನೀಲ್ ರೋಡ್ರಿಗಸ್ ಉಪಸ್ಥಿತರಿದ್ದರು.

Exit mobile version