ಡಾ. ಸರ್ಫ್‍ರಾಝ್ ಜೆ. ಹಾಶಿಂಗೆ “ಭಾರತ್ ಶಿಕ್ಷಾ ರತನ್” ಪ್ರಶಸ್ತಿ ಪ್ರದಾನ
UllalaVani
UN NETWORKS
ಉಳ್ಳಾಲ: ಅಂತರಾಷ್ಟ್ರೀಯ ಖ್ಯಾತಿಯ ಮನಶಕ್ತಿ ತರಬೇತುದಾರ, ಮಂಗಳೂರಿನ ಪ್ರಸಿದ್ಧ ಮನಶಕ್ತಿ ತರಬೇತಿ ಸಂಸ್ಥೆ ಸಾಧನಾ ಅಕಾಡೆಮಿಯ ಆಡಳಿತ ನಿರ್ದೇಶಕ ಹಾಗೂ ಪಿ. ಎ. ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಸರ್ಫ್‍ರಾಝ್‍ಜೆ. ಹಾಶಿಂ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಗಾಗಿ “ಭಾರತ್ ಶಿಕ್ಷಾ ರತನ್”ಎಂಬ ಪ್ರಶಸ್ತಿ ನೀಡಿಗೌರವಿಸಲಾಗಿದೆ.
ನವದೆಹಲಿಯಲ್ಲಿ ಫೆ. 22ರಂದು ಜರುಗಿದ ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಎಂಬ ವಿಷಯದಲ್ಲಿ ಜರುಗಿದ ಸೆಮಿನಾರ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಡಾ. ಸರ್ಫ್‍ರಾಝ್ ಜೆ. ಹಾಶಿಂ ಮನಶಕ್ತಿ ತರಬೇತಿ ನೀಡುವ ಮೂಲಕ ಸಾರ್ವಜನಿಕರಲ್ಲಿ ಸುಪ್ತವಾಗಿರುವ ಅಪಾರ ಸಾಮರ್ಥ್ಯಗಳನ್ನು ಹೊರತಂದು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಅವರ ವೈಯಕ್ತಿಕ ಬೆಳವಣಿಗೆಗೆ ಕೊಡುಗೆ ನೀಡಿರುತ್ತಾರೆ.