ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ; ಪಜೀರು ಮೆರ್ಸಿಯಮ್ಮನವರ ಚರ್ಚ್‌ನಲ್ಲಿ ೭ ವರ್ಷಗಳಿಂದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ, ನೂತನ ಚರ್ಚ್ ಕಟ್ಟಡ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಇದೀಗ ಉರ್ವ ಚರ್ಚ್‌ಗೆ ವರ್ಗಾವಣೆಗೊಂಡಿರುವ ರೆ. ಫಾ. ಸ್ಯ್ಟಾನಿ ಪಿರೇರಾ ರವರಿಗೆ ಬೀಳ್ಕೊಡುಗೆ ಸಮಾರಂಭ ಆಡಳಿತ ಮಂಡಳಿಯ ನೇತೃತ್ವದಲ್ಲಿ ಚರ್ಚ್‌ನಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಕ್ಟರ್ ಮೊಂತೇರೊ ಸ್ವಾಗತಿಸಿದರು. ರೋಶನ್ ಡಿಸೋಜ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಫೆಲಿಕ್ಸ್ ಮೊಂತೆರೊ ವಂದಿಸಿದರು. ವಿನ್ಸೆಂಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ವರದಿ: ಪ್ರೀತಮ್ ಪಜೀರು