UN NETWORKS
ಕೋಟೆಕಾರು: ಕೇಂದ್ರ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ಮನೆ ಮನೆಗೆ ತಿಳಿಸಿ, ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಬಿ.ಜೆ.ಪಿ. ದೇಶ ವ್ಯಾಪಿ ಕಮಲ ಜ್ಯೋತಿ ಅಭಿಯಾನ ನಡೆಸುತ್ತಿದೆ.
ಕನೀರುತೋಟದ ಮಹಿಳಾ ಸದಸ್ಯರ ಮನೆಯಲ್ಲಿ ಕಮಲ ಜ್ಯೋತಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಮಲ ಜ್ಯೋತಿ ಅಭಿಯಾನದ ಸಂಚಾಲಕಿ ಜಿಲ್ಲಾ ಪಮಚಾಯಿತಿ ಸದಸ್ಯೆ ಧನಲಕ್ಷೀ ಗಟ್ಟಿ ಮಾಹಿತಿ ನೀಡಿದರು.ಬಿ.ಜೆ.ಪಿ. ಮಹಿಳಾ ಪ್ರಮುಖರಾದ ಮಮತಾ ಮೋಹನ್‍ರಾಜ್, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯೆ ಜಯಶ್ರೀ ಪ್ರಪುಲ್ಲದಾಸ್, ಸೋಮೇಶ್ವರ ಪಂಚಾಯಿತಿ ಸದಸ್ಯೆ ಪ್ರಫುಲ್ಲ, ಸ್ಥಳೀಯರಾದ ವಿಜಯಲಕ್ಷ್ಮಿ ಹಾಗೂ ಗೀತಾ ಉಪಸ್ಥಿತರಿದ್ದರು.