Site icon Ullalavani

ಕೊಲ್ಲರಕೋಡಿ: ಹಲ್ಲುಗಳ ಆರೈಕೆಯ ಕುರಿತು ಜಾಗೃತಿ ಕಾರ್ಯಕ್ರಮ

UN NETWORKS

ಕೊಲ್ಲರಕೋಡಿ: ದೇರಳಕಟ್ಟೆಯ ಯೇನೆಪೊಯ ನರ್ಸಿಂಗ್ ಕಾಲೇಜಿನ ಮಕ್ಕಳ ಶುಶ್ರುಷಾ ವಿಭಾಗ ಹಾಗೂ ಯೇನೆಪೊಯ ಡೆಂಟಲ್ ಕಾಲೇಜಿನ ಮಕ್ಕಳ ದಂತ ವೈದ್ಯಕೀಯ ವಿಭಾಗ ದ ಜಂಟಿ ಆಶ್ರಯದಲ್ಲಿ ಹಲ್ಲುಗಳ ಆರೈಕೆಯ ಕುರಿತು ಜಾಗೃತಿ ಕಾರ್ಯಕ್ರಮ ಕೊಲ್ಲರಕೋಡಿಯ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು.

ಮಕ್ಕಳ ಶುಶ್ರುಷ ವಿಭಾಗದಿಂದ ಡಾ. ಪ್ರಿಯ ರೇಷ್ಮಾ ಅರಾನ್ಹಾ, ಮೆಲ್ಬಾ ಲೋಬೊ ಹಾಗೂ ದಂತ ವೈದ್ಯಕೀಯ ವಿಭಾಗದಿಂದ ಡಾ. ಶ್ರೀವ್ಯಾಸಲೋನಿ ಮಹಾವೀರನ್ ಹಾಗೂ ಡಾ. ರಕ್ಷಾ ಶೆಟ್ಟಿ ಉಪಸ್ಥಿತರಿದ್ದರು. ಮಕ್ಕಳ ಶುಶ್ರುಷಾ ವಿಭಾಗದ ವಿದ್ಯಾರ್ಥಿಗಳು 6, 7 ಹಾಗೂ 8ನೇ ತರಗತಿಯ ಮಕ್ಕಳಿಗೆ ಹಲ್ಲುಗಳ ಆರೈಕೆಯ ಕುರಿತು ಆರೋಗ್ಯ ಮಾಹಿತಿ ನೀಡಿದರು. ದಂತ ವೈದ್ಯಕೀಯ ಸಿಬ್ಬಂದಿಗಳು ದಂತ ತಪಾಸಣೆಗೈದರು. ಸುಮಾರು 96ವಿದ್ಯಾರ್ಥಿಗಳು ಹಾಜರಿದ್ದರು.

Exit mobile version