Site icon Ullalavani

ಉಳ್ಳಾಲ ಅಳೇಕಲ ಮದನಿ ಶಿಕ್ಷಣ ಸಂಸ್ಥೆ ನಿವೃತ್ತರಿಗೆ ವಿದಾಯಕೂಟ

ಉಳ್ಳಾಲ್‌ನ್ಯೂಸ್ ಡೆಸ್ಕ್

ಉಳ್ಳಾಲ : ಶಿಕ್ಷಣ ಸಂಸ್ಥೆಯ  ಹಿರಿಯ ಶಿಕ್ಷಕರು ನಿವೃತ್ತಿಯಾದಾಗ  ಸಂಸ್ಥೆಗೆ ಅದು ತಂಬಲಾರದ ನಷ್ಟ ಆದರೆ ಸಂಸ್ಥೆಯಿಂದ ಸೇವಾ ನಿವೃತ್ತಿ ಮಾತ್ರ ಆವರ ಮಾರ್ಗದರ್ಶನ ಸಂಸ್ಥೆಗೆ ಮುಂದೆಯೂ ಲಭಿಸಲಿ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಅಭಿಪ್ರಾಯಪಟ್ಟರು. 

ಮದನಿ ಪದವಿಪೂರ್ವ ಕಾಲೇಜು ಅಳೇಕಲ ಉಳ್ಳಾಲ ಇಲ್ಲಿನ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ಆನಂದ ಕೆ.ಆಸೈಗೋಳಿ, ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾದ ಕೇಶವ ನಂಬೀಶ ಎಂ. ಶಿಕ್ಷಕೇತರ ಸಿಬ್ಬಂದಿ ಸೀದಿಯಬ್ಬ ಅವರ ವಿದಾಯಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತಿಯಾದ ಶಿಕ್ಷಕರು ಸದಾ ಕ್ರಿಯಾಶೀಲರಾಗಿರುವವರು. ಅವರು ಮುಂದಿನ ನಿವೃತ್ತ ಜೀವನದಲ್ಲೂ ಇದೇ ಕ್ರಿಯಾಶೀಲತೆಯನ್ನು ಮುಂದುವರೆಸಿಕೊಂಡುಹೋಗುತ್ತಾರೆ ಎನ್ನವ ಭರವಸೆ ಇದೆ ಎಂದ ಅವರು ನಿವೃತ್ತಿಯಾದವರ ಜೀವನ ಸುಖಕರವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮದನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎಚ್.ಹಮೀದ್, ಪ್ರಾಥಮಿಕ ಶಾಲ ಸಂಚಾಲಕ ಯು.ಎಂ. ಇಬ್ರಾಹಿಂ, ಸದಸ್ಯ ತಾಹಿರ್ ತಂಙಳ್, ಉಳ್ಳಾಲ ಪುರಸಭಾ ಮಾಜಿ ಆಧ್ಯಕ್ಷ ಯು.ಎ.ಇಸ್ಮಾಯಿಲ್, ಶಿಕ್ಷಣ ಸಂಸ್ಥೆಯ ಕೋಶಾಽಕಾರಿ ಯು.ಪಿ. ಅರೆಬಿ,ಕಾಲೇಜು ಮತ್ತು ಪ್ರೌಢಶಾಲಾ ಸಂಚಾಲಕ ಯು.ಎಂ. ಇಬ್ರಾಹಿಂ, ಕಾರ್ಯದರ್ಶಿ ಪಂಡಿತ್ ಮಹಮ್ಮದ್, ಉಪಾಧ್ಯಕ್ಷ ಇಬ್ರಾಹಿಂ ಖಾಸಿಂ, ಉಳ್ಳಾಲ ನಗರಸಭಾ ಉಪಾಧ್ಯಕ್ಷೆ ರಝೀಯ ಇಬ್ರಾಹಿಂ ಉಪಸ್ಥಿತರಿದ್ದರು.
ವಿದಾಯ ಸನ್ಮಾನ ಸ್ವೀಕರಿಸಿದ ಪ್ರೌಢಶಾಲಾ ಮುಖ್ಯ ಶಿಕ್ಷಕ ಆನಂದ ಕೆ.ಆಸೈಗೋಳಿ, ಚಿತ್ರಕಲಾ ಶಿಕ್ಷಕ ಕೇಶವ ನಂಬೀಶ ಎಂ. ಶಿಕ್ಷಕೇತರ ಸಿಬ್ಬಂದಿ ಸೀದಿಯಬ್ಬ ಮಾತನಾಡಿದರು.
ಪ್ರೌಢಶಾಲಾ ಶಿಕ್ಷಕಿ ಚಂದ್ರಕಲಾ ಸ್ವಾಗತಿಸಿದರು. ಶಿಕ್ಷಕ ಪಿ.ಡಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಇಬ್ರಾಹಿಂ ಸನ್ಮಾನಿತರ ವಿವರ ನೀಡಿದರು.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ವಂದಿಸಿದರು.

Exit mobile version