UN NETWORKS
ತೊಕ್ಕೊಟ್ಟು : ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಕೆಲಸವನ್ನು ಪಡೆಯುವುದರ ಜೊತೆಗೆ ಯಶಸ್ವಿ ಜೀವನ ರೂಪಿಸಲು ಸಾಧ್ಯ ಎಂದು ಅಂತರಾಷ್ಟ್ರೀಯ ಕಬ್ಬಡ್ಡಿ ಪಟು ಸಚಿನ್ ಸುವರ್ಣ ಅಭಿಪ್ರಾಯಪಟ್ಟರು.
ಅವರು ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ವಿಧಾನಸಭಾ ಕ್ಷೇತ್ರ ತೊಕ್ಕೊಟ್ಟು ಇವರ ಆಶ್ರಯದಲ್ಲಿ ಚೆಂಬುಗುಡ್ಡೆ ಮಂಗಳೂರು ವನ್ ಕಾಲೇಜು ಮೈದಾನದಲ್ಲಿ ಬಿಲ್ಲವ ಸಮಾಜ ಬಾಂಧವರಿಗಾಗಿ ನಡೆದ 16 ನೇ ವರ್ಷದ ಕೋಟಿ ಚೆನ್ನಯ ಕ್ರೀಡಾಕೂಟ- 2019 ಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಆಟದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಉಳ್ಳಾಲ ವ್ಯಾಪ್ತಿಯಲ್ಲಿ ಹಲವು ಕಬಡ್ಡಿ ಪಟುಗಳು ಇದ್ದು, ಅವರಿಗೆ ಬೆಳೆಯಲು ಸಂಘಟನೆಗಳಿಂದ ಪ್ರೋತ್ಸಾಹ ಅಗತ್ಯ. ಕಬ್ಬಡ್ಡಿ ಕ್ಷೇತ್ರ ತನ್ನನ್ನು ಉತ್ತಮ ಉದ್ಯೋಗದಲ್ಲಿರುವಂತೆ ಮಾಡಿತು. ಹೀಗೆ ಇತರೆ ಆಟದಲ್ಲಿ ಸಾಧಿಸಿದಲ್ಲಿ ಕೆಲಸ ಸಿಗುವುದರ ಜತೆಗೆ ಉತ್ತಮ ಜೀವನ ರೂಪಿಸಲು ಸಾಧ್ಯ ಎಂದರು.
ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಹಾಗೂ ಲೇಖಕಿ ವಿಜಯಲಕ್ಷ್ಮಿ ಕಟೀಲು ಮಾತನಾಡಿ, ಪ್ರಸ್ತುತ ಜನ ಜಾತಿ ಹೇಳಲು ಹಿಂಜರಿಯುತ್ತಿದ್ದಾರೆ.ಮಕ್ಕಳಲ್ಲಿ ಕುಲಗುರುಗಳ ಅರಿವು ಇರುವುದಿಲ್ಲ. ಪೌರಾಣಿಕ ವಿಚಾರಗಳ ಕುರಿತು ಅರಿವಿನ ಕೊರತೆಯಿಂದ ಯುವಸಮುದಾಯ ದಾರಿತಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಿ ಮಕ್ಕಳಲ್ಲಿ ಎಲ್ಲಾ ಜಾತಿಯವರ ಜತೆಗೆ ಹೊಂದಿಕೊಂಡು ಹೋಗುವ ಮನೋಭಾವವನ್ನು ಬೆಳೆಸುವ ಅವಕಾಶ ಹಿರಿಯರು ಮಾಡಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕಬ್ಬಡ್ಡಿ ಪಟು ಸಚಿನ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ ಶೇಖರ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಭಿವೃದ್ಧಿ ಸಮಿತಿ ಉಳ್ಳಾಲ ವಲಯದ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಿನ್ಯಾ ಶ್ರೀ ಮಲರಾಯ ಧೂಮಾವತಿ ದೈವಗಳ ಭಂಡಾರಮನೆಯ ಆಡಳಿತ ಮೊಕ್ತೇಸರ ಬಾಬು ಕಿನ್ಯಾ, ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಕೋಟೆಕಾರು ಶ್ರೀ ಸಾಯಿ ಮಂದಿರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಪಿ, ಕೊಲ್ಯ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಆನಂದ.ಎಸ್ ಕೊಂಡಾಣ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಗಂಗಾಧರ ಪೂಜಾರಿ, ಉಳ್ಳಾಲ ಬಂಡಿಕೊಟ್ಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅದ್ಯಕ್ಷ ಯು.ಕೆ ಗೋಪಾಲ್, ಅಂಬ್ಲಮೊಗರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಬೋಳ್ಯಾರು ಬ್ರಹ್ಮಶ್ರೀ ನಾರಾಯಣಗುರು ಸೇವಾಸಂಘದ ಅಧ್ಯಕ್ಷ ಮೋಹನ್ ಕುರ್ನಾಡು, ತಲಪಾಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ನಾರಾಯಣ ಪೂಜಾರಿ, ಸೋಮೇಶ್ವರ ಕೊಲ್ಯದ ಯುವವಾಹಿನಿ ಘಟಕದ ಅಧ್ಯಕ್ಷ ಕುಸುಮಾಕರ್ ಕುಂಪಲ, ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕೆ.ಟಿ ಸುವರ್ಣ ಪ್ರಾಸ್ತಾವಿಕ ಮಾತನಾಡಿದರು.
ಜೀವನ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್ .ಯಸ್ ಕುಂಪಲ ನಿರೂಪಿಸಿದರು.ಕಾರ್ಯಾಧ್ಯಕ್ಷ ಸತೀಶ್ ಕರ್ಕೇರಾ ವಂದಿಸಿದರು.
