UN NETWORKS
ಉಳ್ಳಾಲ: ಹಿಂದಿನ ಕಾಲದಲ್ಲಿ ಧಾರ್ಮಿಕ ಭಾಷಣ ಕೇಳಿದ ಅದೆಷ್ಟೋ ಜನರು ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ, ಭಾಷಣದ ತೀವೃತೆಗೆ ಹೆದರಿ ಸಾವೀಗೀಡಾದ ಪ್ರಸಂಗವೂ ಇದೆ, ಆದರೆ ಇಂದು ನಮ್ಮಲ್ಲಿನ ಧಾರ್ಮಿಕ ಕೊರತೆಯಿಂದ ಯಾವುದೇ ಭಾಷಣಗಳು ಪ್ರಭಾವ ಬೀರುತ್ತಿಲ್ಲ ಎಂದು ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ಅಭಿಪ್ರಾಯಪಟ್ಟರು.
ಕೇಂದ್ರ ಜುಮಾ ಮಸೀದಿ ಮತ್ತು ಹಝ್ರತ್ ಸಯ್ಯದ್ ಮದನಿ ದರ್ಗಾ ಸಮಿತಿಯಿಂದ ಭಾನುವಾರ ದರ್ಗಾ ವಠಾರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಅಭಿನಂದನೆ, ದರ್ಗಾ ಸಂದರ್ಶನಾರ್ಥಿಗಳ ಮಾಹಿತಿ ಕೇಂದ್ರ ಉದ್ಘಾಟನೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾಹಿತಿ ಕೇಂದ್ರ ಉದ್ಘಾಟಿಸಿ, ಉಳ್ಳಾಲ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಡುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಕೇಂದ್ರ ನಿಜಕ್ಕೂ ಪ್ರಯೋಜನಕಾರಿ ಎಂದು ಹೇಳಿದರು. ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಅತಾವುಲ್ಲಾ ಜೋಕಟ್ಟೆ, ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಮುಫತ್ತಿಷ್ ಸುಲೈಮಾನ್ ಸಖಾಫಿ, ಪ್ರಾಂಶುಪಾಲ ಝೈನ್ ಸಖಾಫಿ, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಪದಾಧಿಕಾರಿಗಳಾದ ಬಾವ ಮುಹಮ್ಮದ್, ಯು.ಕೆ.ಇಲ್ಯಾಸ್, ನೌಷಾದ್ ಮೇಲಂಗಡಿ, ಯು.ಟಿ.ಇಲ್ಯಾಸ್, ಅಝಾದ್ ಇಸ್ಮಾಯಿಲ್, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲಾ, ಅಮೀರ್, ಇಬ್ರಾಹಿಂ ಕಕ್ಕೆತೋಟ, ಅಯ್ಯೂಬ್ ಮಂಚಿಲ, ಅಝಾದ್ ಇಸ್ಮಾಯಿಲ್, ಎವರೆಸ್ಟ್ ಮುಸ್ತಫಾ,ಎ.ಕೆ.ಮೊಯ್ಯಿದಿನ್, ಖಾಸಿಂ, ಅಬ್ಬಾಸ್., ಹನೀಫ್ ಚೆಂಬುಗುಡ್ಡೆ, ಯು.ಕೆ ಅಮ್ಮಬ್ಬ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿ ಕೆ.ಪಿ.ಅಬ್ದುಲ್ ಶುಕೂರ್ ಅವರನ್ನು ಸನ್ಮಾನಿಸಲಾಯಿತು.ದರ್ಗಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ ಸ್ವಾಗತಿಸಿದರು. ಅಯೂಬ್ ಮಂಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.