UN NETWORKS
ಕೊಣಾಜೆ : 2011ರ ಭಾಷಾಗಣತಿಯ ಪ್ರಕಾರ ಭಾಷೆಗಳನ್ನಾಡುವ ಜನರ ಏರಿಕೆಯಲ್ಲಿ ಹಿಂದಿಯಲ್ಲಿ ಶೇ.43, ತೆಲುಗು, ತಮಿಳು ಭಾಷೆ ಶೇ. 9 ಬೆಳವಣಿಗೆಯನ್ನು ಕಂಡಿದ್ದು ಕನ್ನಡ ಶೇ.3.1 ಬೆಳವಣಿಗೆಯನ್ನು ಹೊಂದಿದ್ದು ಇದು ದೇಶದಲ್ಲೇ ಕನಿಷ್ಟವಾಗಿದೆ. ಇದು ಅಪಾಯಕಾರಿ ಕುಸಿತ. ಕನ್ನಡದ ಹೆಚ್ಚಿನ ಬಳಕೆ ಮತ್ತು ಕನ್ನಡದೊಳಗಿನ ಶಕ್ತಿಯನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ತರುವ ಮೂಲಕ ನಾವು ಈ ಆತಂಕದಿಂದ ಪಾರಾಗಬೇಕಿದೆ ಎಂದು ದೆಹಲಿಯ ಜೆಎನ್‍ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಗಿಳಿವಿಂಡು ಒಕ್ಕೂಟದ ಅಧ್ಯಕ್ಷ ಪ್ರೊ. ಬಿ ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ನಾಗಪ್ಪ ಗೌಡ ವಂದಿಸಿದರು. ಡಾ. ಧನಂಜಯ ಕುಂಬ್ಳೆ ನಿರೂಪಿಸಿದರು.
ಸಮಾವೇಶದಲ್ಲಿ ಗಿಳಿವಿಂಡಿನ ಮಹಾಸಭೆ ನಡೆದು 2020ರಲ್ಲಿ ಗಿಳಿವಿಂಡು ಮಹಾಸಮಾವೇಶ ನಡೆಸುವ ಬಗ್ಗೆ ಚರ್ಚಿಸಲಾಯಿತು. ಅಪರಾಹ್ನ ನಡೆದ ದಾಖಲೀಕರಣದಲ್ಲಿ ಕನ್ನಡ ವಿಭಾಗದ ಈ ಹಿಂದಿನ 49 ತಂಡಗಳ ದಾಖಲೀಕರಣವನ್ನು ನಡೆಸಲಾಯಿತು. ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.