Site icon Ullalavani

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ

UN NETWORKS

ಉಳ್ಳಾಲ: ಮಕ್ಕಳಿಗೆ ತಿನ್ನಲು, ಬಟ್ಟೆ ತೊಡಲು ಕಲಿಸುವ, ಶಿಕ್ಷಣ ಒದಗಿಸುವ ಕರ್ತವ್ಯ ಪೋಷಕರದ್ದಾಗಿದೆ. ಧಾರ್ಮಿಕ ಅರಿವು ಕೊರತೆ ಇರುವ ಮಕ್ಕಳನ್ನು ಧಾರ್ಮಿಕ ಕ್ಷೇತ್ರಗಳಿಗೆ ಕರಕೊಂಡು ಹೋಗುವುದು ಸರಿಯಲ್ಲ. ತಂದೆ ತಾಯಿ ಸರಿಯಾಗಿ ಇದ್ದರೆ ಮಕ್ಕಳು ಸರಿಯಾಗಿ ದ್ದು ಒಳ್ಳೆಯ ದಾರಿ ಹಿಡಿಯುತ್ತಾರೆ. ಪೋಷಕರ ಕಾರ್ಯ ಚಟುವಟಿಕೆ ಗೆ ಅನುಗುಣವಾಗಿ ಮಕ್ಕಳು ಇರುತ್ತಾರೆ. ಆದ್ದರಿಂದ ಮಕ್ಕಳಿಗೆ ಒಳ್ಳೆಯ ಶಬ್ದಗಳನ್ನು ಕೇಳಿಸಬೇಕು, ಉತ್ತಮ ಶಿಕ್ಷಣ ನೀಡಬೇಕು ಎಂದು ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.

ಅವರು ಕಿನ್ಯದಲ್ಲಿ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ರವರ ಹೆಸರಿನ ಲ್ಲಿ ನಡೆಯುವ ಕೂಟು ಝಿಯಾರತ್ ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದರು.ಮುಖ್ಯ ಭಾಷಣ ಮಾಡಿದ ಮೊಯ್ಯದ್ದೀನ್ ಅಝ್‍ಅರಿ ಅವರು, ನಾವು ಪರಿಶುದ್ದವಾಗಿದ್ಧರೆ ನಮ್ಮ ಮಕ್ಕಳು ಪರಿಶುಧ್ಧರಾಗುತ್ತಾರೆ. ತಾಯಿಯ ಗರ್ಭ ದಲಿ ಮಗು ಇರುವ ಸಂದರ್ಭದಲ್ಲಿ ಜೀವನ ಬೇರೆ ಯೇ ಇರುತ್ತದೆ. ಈ ವೇಳೆ ಪಾಪದ ಲೆಕ್ಕಾಚಾರ ಮಗುವಿಗೆ ಇರುವುದಿಲ್ಲ. ಮಕ್ಕಳನ್ನು ಬೆಳೆಸುವುದು ಮುಖ್ಯವಲ್ಲ ಅವರಿಗೆ ಶಿಕ್ಷಣ ಒದಗಿಸುವ ಮೂಲಕ ಭವಿಷ್ಯ ದ ದಾರಿ ತೋರಿಸುವುದು ಮುಖ್ಯ ಆಗಿರುತ್ತದೆ. ಯಾವ ಕಾರ್ಯ ಮಾಡುವಾಗಲು ಅಲ್ಲಾಹನ ನಾಮದಿಂದ ಆರಂಭಿಸಬೇಕು ಎಂದರು.ಕಿನ್ಯ ಜಮಾಅತ್ ಅಧ್ಯಕ್ಷ ಹುಸೈನ್ ಕುಂಞ ಹಾಜಿ ಕಾರ್ಯ ಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು.

ವೇದಿಕೆಯಲ್ಲಿ ಕಿನ್ಯ ಮುದರ್ರಿಸ್ ಫತ್ತಾಹ್ ಫೈಝಿ,ಸದ್ ರ್ ಫಾರೂಕ್ ದಾರಿಮಿ, ಮಾಜಿ ಅಧ್ಯಕ್ಷ ಸಾಧುಕುಂಞ ಮಾಸ್ಟರ್,ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿಕೇಂದ್ರ ಜುಮಾ ಮಸೀದಿ ಪ್ರ. ಕಾರ್ಯದರ್ಶಿ ಅಬೂಸಾಲಿ ಕುರಿಯಕಾರ್ ಉಪಸ್ಥಿತರಿದ್ದರು.ಫಾರೂಕು ದಾರಿಮಿ ಕಿನ್ಯ ಸ್ವಾಗತಿಸಿದರು.

Exit mobile version