Site icon Ullalavani

ಕೊಲ್ಯ ಮಠದ 31ನೇ ವಾರ್ಷಿಕೋತ್ಸವ ಸಮಾರಂಭ

UN NETWORKS

ಉಳ್ಳಾಲ: ನೊಂದವರ ಹಾಗೂ ಅಶಕ್ತರ ಪಾಲಿನ ಆಶಾದಾಯಕರಾಗಿದ್ದವರು ಶ್ರೀ ರಮಾನಂದ ಸ್ವಾಮೀಜಿಯವರ ಕಾರ್ಯ ಮರೆಯಲಾಗದು. ಎಲ್ಲರಿಗೂ ಅವರ ಸೇವೆ ಸ್ಫೂರ್ತಿದಾಯಕವಾಗಿದೆ. ಅವರ ಮಠ , ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಭಕ್ತ ಸಮೂಹದಿಂದ ಆಗಬೇಕಿದೆ ಎಂದು ಗುರುಪುರ ವಜ್ರದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ಇದರ 31ನೇ ವಾರ್ಷಿಕ ಪ್ರತಿಷ್ಠಾನ ಮಹೋತ್ಸವ ದ ಪ್ರಯುಕ್ತ ಇತ್ತೀಚೆಗೆ ಕೊಲ್ಯದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಎಲ್ಲೇ ಅವಘಡ ಸಂಭವಿಸಿದರೂ ತಕ್ಷಣ ತನ್ನಿಂದಾದ ಸಹಾಯ ಮಾಡುವ ಮೂಲಕ ಮನೆಮಂದಿಗೆ ಧೈರ್ಯ ಹೇಳುತ್ತಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಶಾಲೆಯ ಅಭಿವೃದ್ಧಿ ಮತ್ತು ದೇವಸ್ಥಾನದ ನಿತ್ಯ ಪೂಜಾ ಕಾರ್ಯಗಳಿಗೆ ಭಕ್ತರ ಸಹಕಾರ ಅತ್ಯಗತ್ಯ ಆ ಮೂಲಕ ಅವರ ಆಶಯ ಈಡೇರಿಸುವಂತೆ ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕ ಹಾಗೂ ಮುಖ್ಯ ವ್ಯೆದ್ಯಾಧಿಕಾರಿ ಡಾ| ಅಣ್ಣಯ್ಯ ಕುಲಾಲ್ ಮಾತನಾಡಿ, ಶ್ರೀ ರಮಾನಂದ ಸ್ವಾಮೀಜಿಗಳ ಸೇವಾಕಾರ್ಯ ಇಂದಿನ ದಿನಗಳಲ್ಲಿ ಅತಿ ಅವಶ್ಯಕ. ಅವರು ಕೇವಲ ಮಠಕ್ಕೆ ಸೀಮಿತ ವಾಗಿರದೆ ಭಕ್ತರ ಸಂಕಷ್ಟ ಕಾಲದಲ್ಲಿ ಸಹಾಯ ಮಾಡುವ ಮೂಲಕ ಮನುಷ್ಯ ರಲ್ಲಿ ದೇವರನ್ನು ಕಂಡವರು. ಈ ಸಂದರ್ಭದಲ್ಲಿ ಸೇನಾ ಯೋಧರನ್ನು ನೆನಪಿಸುತ್ತಾ ದೇಶಕ್ಕಾಗಿ ಮಡಿದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗ ಕ್ಕೆ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದರು. ಯೋಧರ ಬಗ್ಗೆ ಟೀಕೆ ಮಾಡುವ ಜನ ಆಪತ್ಕಾಲದಲ್ಲಿ ಸೇನೆಯ ಸಹಕಾರ ಬಯಸುತ್ತಾರೆ. 44 ಯೋಧರ ಬಲಿದಾನ ವ್ಯರ್ಥ ವಾಗದೆ ಭಯೋತ್ಪಾದಕರ ಸಂಪೂರ್ಣ ನಿರ್ಮೂಲನೆ ಆಗಬೇಕಿದೆ. ದೇಶದ ರಕ್ಷಣಾ ವಿಚಾರದಲ್ಲಿ ಪ್ರಧಾನಿ ಕ್ಯೆಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗೋಣ ಎಂದರು.

ಮುಖ್ಯ ಅತಿಥಿಯಾಗಿ ಮಂಗಳೂರಿನ ನ್ಯಾಯವಾದಿ ಶಿವರಾಮ ಮಣಿಯಾಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್, ಮಾತೃ ಮಂಡಳಿ ಅಧ್ಯಕ್ಷ ವೀಣಾ ಬಾಲಕೃಷ್ಣ, . ಟ್ರಸ್ಟ್ ಅಧ್ಯಕ್ಷ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.ಈ ಸಂದರ್ಭ ನಿವೃತ್ತ ಸೇನಾನಿ ಕ್ಯಾ. ಗೌರಿ ಶಂಕರ್ ಪ್ರಸಾದ್ ಮತ್ತು ಸೋಮೇಶ್ವರ ಜೀವರಕ್ಷಕದಳದ ಅಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ವ್ಯೆವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಪ್ರಾಸ್ತಾವಿಕ ಮಾತಿನೊಂದಿಗೆ ಅತಿಥಗಳ ಸ್ವಾಗತವನ್ನು ನಾರಾಯಣ ಕುಂಪಲ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ವಂದಿಸಿದರು.

Exit mobile version