Site icon Ullalavani

ಅಲೇಕಳ: ಹುತಾತ್ಮ ವೀರ ಯೋಧರಿಗಾಗಿ ಸಂತಾಪ ಸಭೆ

UN NETWORKS

ಅಲೇಕಳ: ಇಸ್ಲಾಂ ಧರ್ಮ ಯಾರೋ ಸ್ಥಾಪಿಸಿದ್ದಲ್ಲ, ಇಸ್ಲಾಂ ಹೆಸರನ್ನು ಹೇಳಿಕೊಂಡು ದುರಾಚಾರ ನಡೆಸುವ ಹಕ್ಕು ಯಾರಿಗೂ ಇಲ್ಲ. ಅಲ್ಲಾಹನ ವಿರುದ್ಧ, ಪ್ರವಾದಿ(ಸ) ಸಂದೇಶದ ವಿರುದ್ಧ ಮಾಡಿದ ‌ಕೃತ್ಯ ಎಸಗಿರುವ ಉಗ್ರರ ಮೇಲೆ ದೇವನ ಶಾಪವಿದೆ ಎಂದು ಉಳ್ಳಾಲ ನಗರಸಭೆಯ ಸದಸ್ಯ ಅಯೂಬ್ ಮಂಚಿಲ ಅಭಿಪ್ರಾಯಪಟ್ಟರು.

ಅಲೇಕಳ ನುಸ್ರತುಲ್ ಮಸಾಕೀನ್ ಟ್ರಸ್ಟ್, ಸಫರ್ ಮಂಚಿಲ, ಅಲೇಕಳ ಸ್ಪೋಟಿಂಗ್, ಬಿ ಬಾಯ್ಸ್, ಮಾರ್ಗತ್ತಲೆ ಯುನೈಟೆಡ್ ಚಾರಿಟೇಬಲ್ ಟ್ರಸ್ಟ್, ಸೆವೆನ್‌ ಸ್ಟಾರ್,‌ ನಜತ್ ಕ್ರಿಕೆಟರ್ಸ್ ಅಲೇಕಳ, ಯಂಗ್ ಬಾಯ್ಸ್, ಯಂಗ್ ಫ್ರೆಂಡ್ಸ್,‌ ಮೆಹಫಿಲ್ ಗಯ್ಸ್, ಗಡಗಡ ಗಯ್ಸ್ ಅಲೇಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಯೋಧರ ಹತ್ಯೆಯನ್ನು ಖಂಡಿಸಿ ಅಲೇಕಳದಲ್ಲಿ ಗುರುವಾರ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದರು. ಕಾಶ್ಮೀರ ಭಾರತ ಸ್ವರ್ಗ, ಇಲ್ಲಿ ಇಸ್ಲಾಮಿನ ಹೆಸರು ಹೇಳಿಕೊಂಡು ನಡೆಸಿರುವ ದಾಳ ಅತ್ಯಂತ ಹೇಯ ಕೃತ್ಯವಾಗಿದೆ. ಆಧುನಿಕ ವಸ್ತ್ರಗಳನ್ನು ಸರ್ಕಾರ ದೊರಕಿಸಿ ಕೊಡಲು ಮುಂದಾಗಬೇಕು ಎಂದು ಹೇಳಿದರು.
ಮುಖಂಡ ಯು.ಕೆ.ಮುಸ್ತಫ ಮಾತನಾಡಿ, ವಿಶ್ವದ ಇತರ ದೇಶಗಳು ಆದಾಯದ ಶೇ.60 ದೇಶದ ಭದ್ರತೆಗಾಗಿ ವಿನಿಯೋಗಿಸುತ್ತಾರೆ, ಅದೇ ರೀತಿ ನಮ್ಮ ದೇಶದಲ್ಲೂ ಭದ್ರತೆ, ಸೈನಿಕರ ಅತ್ಯಾಧುನಿಕ ವ್ಯವಸ್ಥೆಗಾಗಿ ಹೆಚ್ಚಿನ ಆದ್ಯತೆ ಕಲ್ಪಿಸಬೇಕಾಗಿದೆ. ಕೃತ್ಯ ಎಸಗಿರುವ ಸಂಘಟನೆಯನ್ನು ನಾಮವಶೇಷ ಮಾಡಬೇಕಾಗಿದೆ ಎಂದು ತಿಳಿಸಿದರು.ಯು.ಎ.ಇಸ್ಮಾಯಿಲ್, ಅಸ್ಗರ್ ಅಲಿ, ನುಸ್ರತುಲ್ ಕಾರ್ಯದರ್ಶಿ ಯು.ಎನ್.ಮುಹಮ್ಮದ್, ಮುಹಮ್ಮದ್ ಹನೀಫ್, ಮುಹಮ್ಮದ್ ಫಾರೂಕ್, ‌ಆಸಿಫ್ ಮಾರ್ಗತ್ತಲೆ,‌ ಕಬೀರ್ ಅಲೇಕಳ, ‌ರಹ್ಮತ್ ಅಲೇಕಳ, ನಝೀರ್ ಆರ್.ಕೆ., ದರ್ಗಾ ಸದಸ್ಯರಾದ ಕುಂಞಿಮೋನು, ಅಲಿಮೋನು, ಜಾಫರ್ ಅಲೇಕಳ, ಇಬ್ರಾಹಿಂ ಕಕ್ಕೆತೋಟ, ಯು.ಬಿ.ಸಿದ್ದೀಕ್, ಶಕೀಲ್, ರಿಯಾಝ್ ಮಾರ್ಗತ್ತಲೆ ಇನ್ನಿತರರು ಉಪಸ್ಥಿತರಿದ್ದರು.

Exit mobile version