Site icon Ullalavani

ಬೆಂಗಳೂರು : 8 ವಸತಿಗಳ ಕೀಲಿಕೈ ವಿತರಣೆ ಮತ್ತು ಕುಟುಂಬ ಸಂಗಮ ಕಾರ್ಯಕ್ರಮ

UN NETWORKS

ಬೆಂಗಳೂರು : ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಬೆಂಗಳೂರಿನ ಹೃದಯ ಭಾಗದಲ್ಲಿ ನಿರ್ಗತಿಕರಿಗಾಗಿ ನಿರ್ಮಿಸಿರುವ 8 ವಸತಿಗಳ ಕೀಲಿಕೈ ವಿತರಣೆ ಮತ್ತು ಕುಟುಂಬ ಸಂಗಮವು ಇಂದು ಸಂಜೆ 5 ರಿಂದ ರಾತ್ರಿ 11 ರವರೆಗೆ ಬೆಂಗಳೂರು ಟೌನ್ ಹಾಲ್ ನಲ್ಲಿ ನಡೆಯಲಿದೆ.

ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾಕ್ಟರ್ N.A ಮೋಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೇರಳ ಮುಸ್ಲಿಂ ಯೂತ್ ಲೀಗ್ ಇದರ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಗದ್ವಿಖ್ಯಾತ ವಾಗ್ಮಿಯೂ ಧಾರ್ಮಿಕ ವಿದ್ವಾಂಸರೂ ಆಗಿರುವ ಉಸ್ತಾದ್ ಮುಸ್ತಫಾ ಹುದವಿ ಆಕೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಕರ್ನಾಟಕ ವಕ್ಫ್ ಸಚಿವರಾದ ಜನಾಬ್ ಜಮೀರ್ ಅಹ್ಮದ್ ಖಾನ್, ರಾಜ್ಯ ನಗರಾಭಿವೃದ್ಧಿ ಸಚಿವ ಜನಾಬ್ ಯುಟಿ ಖಾದರ್, ಶಾಸಕರಾದ ಆರ್ ರಾಮಲಿಂಗ ರೆಡ್ಡಿ, ಎನ್ ಎ ಹಾರಿಸ್, ವಿಧಾನಸಭಾ ಸದಸ್ಯರಾದ ಬಿ ಎಂ ಫಾರೂಕ್ ರಿಜ್ವಾನ್ ಅರ್ಷದ್ ಹಾಗೂ ಜಿಸಿಸಿ ಉದ್ಯಮಿಯಾದ ಎಂ ಸಿ ಲಫೀರ್ ಮುಹಮ್ಮದ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಸುಪ್ರಸಿಧ್ಧ ಭಾಷಣಕಾರರೂ, ಗಾಯಕರೂ ಆದ ನವಾಝ್ ಪಾಲೇರಿ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Exit mobile version