Site icon Ullalavani

ದೇರಳಕಟ್ಟೆ : ನಿಟ್ಟೆ ವಿವಿ ವತಿಯಿಂದ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ

UN NETWORKS

ದೇರಳಕಟ್ಟೆ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ , ಹಾಗೂ ಉಗ್ರರ ಕೃತ್ಯ ಖಂಡಿಸಿ ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾಲಯ ವತಿಯಿಂದ ದೇರಳಕಟ್ಟೆಯಿಂದ ತೊಕ್ಕೊಟ್ಟು ವರೆಗೆ ಮೌನ ಮೆರವಣಿಗೆ ಇಂದು ನಡೆಯಿತು.ನಿಟ್ಟೆ ವಿ.ವಿಯ ಸುಮಾರು 1,000 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮೌನ ಮೆರವಣಿಗೆಯಲ್ಲಿ ಪಾಲ್ಗೊಂಡರು.

ನಿಟ್ಟೆ ವಿ.ವಿ ಕುಲಸಚಿವೆ ಅಲ್ಕಾ ಕುಲಕರ್ಣಿ ಮಾತನಾಡಿ, ದೇಶದ ವಾಸಿಗಳು ನೆಮ್ಮದಿಯಿಂದ ಬದುಕಲು ಗಡಿ ಕಾಯುವ ಯೋಧರೇ ಕಾರಣ. ಅವರ ಹುತಾತ್ಮರಾದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸುವುದು ದೇಶದ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದ ಕುರಿತು ಜಾಗೃತಿ ಹಾಗೂ ದೇಶಭಕ್ತಿಯೂ ವಿದ್ಯಾರ್ಥಿಗಳಲ್ಲಿ ಜಾಗೃತಿಯಾಗಲಿ ಎಂದರು.

Exit mobile version