Site icon Ullalavani

ದೇರಳಕಟ್ಟೆ : ಎಸ್.ಕೆ.ಎಸ್.ಎಫ್ ಸ್ಥಾಪಕ ದಿನಾಚರಣೆ

UN NETWORKS

ದೇರಳಕಟ್ಟೆ: ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ಮುಂಬಾಗದಲ್ಲಿ SKSSF ಸ್ಥಾಪಕ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಖಂಡನಾ ಸಭೆಯು ಸರ್ವ ಮಹನೀಯರ ಸಮ್ಮುಖದೊಂದಿಗೆ ನಡೆಯಿತು.

ದೇರಳಕಟ್ಟೆ ಹಾಯಾತುಲ್ ಇಸ್ಲಾಮ್ ಸೆಕೆಂಡರಿ ಮದರಸ ಅಧ್ಯಾಪಕರಾದ ಜಬ್ಬಾರ್ ಮುಸ್ಲಿಯಾರ್ ಕರಾಯ ರವರು ಸ್ಚಾಗತಿಸಿದರು.ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಡಿ. ಧ್ವಜಾರೋಹಣವನ್ನು ನೆರವೇರಿಸಿದರು.
SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಜನಾಬ್ ಸಯ್ಯದ್ ಅಲಿ ರವರ ಅದ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಬಹು ಶರೀಫ್ ಅರ್ಶದಿ ರವರು ದುವಾ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ SKSSF ನ ಕಾರ್ಯವೈಖರಿಯ ಬಗ್ಗೆ ಪ್ರಭಾಷಣ ನಡೆಸಿದರು.

SKSSF ಕೇಂದ್ರ ಸಮಿತಿ ಸದಸ್ಯರಾದ ಬಹು ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ರವರು ಖಂಡನಾ ಪ್ರಭಾಷಣ ನಡೆಸಿದರು. ದೇರಳಕಟ್ಟೆ ಎಜುಕೇಷನಲ್& ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನಾಟ್ಟೆಕ್ಕಲ್. ಎಸ್.ವೈ.ಎಸ್.ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಅಲಿ ಆಶಂಸ ಭಾಷಣ ಮಾಡಿದರು.ದೇರಳಕಟ್ಟೆ ಬದ್ರಿಯಾ ಜಮಾ’ಅತ್ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಡಿ. ರಹ್ಮಾನಿಯಾ ಜುಮಾ ಮಸೀದಿ ಪನೀರ್ ಅಧ್ಯಕ್ಷರಾದ ಹಾಜಿ ಅಬ್ದುರ್ರಹ್ಮಾನ್, ಹಾಜಿ ಸಿರಾಜ್ ತಾಜ್, ಮೊಹಮ್ಮದ್ ಪನೀರ್,ಬೆಲ್ಮ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿ ಕಬೀರ್ ಡಿ, SKSSF ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಖಾದರ್, ಮೊಹಮ್ಮದ್ ನಡುಪದವು,ಬದ್ಯಾರ್ ಶಂಸುಲ್ ಉಲಮಾ ಮದರಸ ಉಪಾಧ್ಯಕ್ಷರಾದ ಹನೀಫ್ ಜಿ.ಎಂ. ಬದ್ರಿಯಾ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಫೈಝಲ್ .ಎಂ,ಎಸ್.ಕೆ.ಎಸ್.ಎಫ್ ದೇರಳಕಟ್ಟೆ ಉಪಾಧ್ಯಕ್ಷರಾದ ಹರ್ಷಾದ್ ಕುದ್ರೋಳಿ ರಹ್ಮತ್ ಪಾಲ್ದಡಿ, ಯಾಕುಬ್ ದೇರಳಕಟ್ಟೆ, ಹಾಗೂ ಇನ್ನಿತರ ಉಲಮಾ ಉಮಾರಾ ನೇತಾರರು ಭಾಗವಹಿಸಿದ್ದರು.

Exit mobile version