Site icon Ullalavani

ಫೇಸ್ ಬುಕ್ ನಲ್ಲಿ ದೇಶದ್ರೋಹ ಪೋಸ್ಟ್ ಆರೋಪ,ಪೊಲೀಸ್ ಕಮೀಷನರ್ ಗೆ ದೂರು

UN NETWORKS

ಉಳ್ಳಾಲ: ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರನ್ನು ಜಾತಿಯಿಂದ ವಿಂಗಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಯುವ ವಕೀಲ ಹಾಗೂ ಸಿಪಿಎಂ ಕಾರ್ಯಕರ್ತ ನಿತಿನ್ ಕುತ್ತಾರ್, ಇವರು ದೇಶದ್ರೋಹ ನಡೆಸಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆರೋಪಿಸಿ ಮಂಗಳೂರು ನೊಂದ ನಾಗರಿಕರು ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಲಾಗಿದೆ.

ದೇಶ ಸೇನೆಯ ಸೈನಿಕರನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ. ಇದರ ನಡುವೆ ದೇಶದಲ್ಲೇ ಇದ್ದುಕೊಂಡು ಕುತ್ತಾರು ನಿವಾಸಿ ನಿತಿನ್ ಕುತ್ತಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೃತರಾದ ಸೈನಿಕರಲ್ಲಿ 13-ಎಸ್.ಸಿ, 14- ಎಸ್.ಟಿ, 14-ಒಬಿಸಿ, 1-ಮುಸ್ಲಿಂ ಮತ್ತು ಬ್ರಾಹ್ಮಣ-0 ಎಂದು ಬರೆದಿರುವುದು ಪ್ರಚೋದನಾತ್ಮಕವಾಗಿದೆ. ಬ್ರಾಹ್ಮಣರು ಸೈನ್ಯದಲ್ಲಿ ಭಾಗವಹಿಸದೆ ಬೇರೆ ಜಾತಿಯವರನ್ನು ಸೈನ್ಯಕ್ಕೆ ಸೇರಲು ಪ್ರಚೋದಿಸಿ ಅವರನ್ನು ಉಗ್ರರು ಕೊಲ್ಲಲೆಂದೇ ಕಳಹಿಸುತ್ತಾರೆ ಎಂಬ ಸಂದೇಶ ಸಾರಿದಂತಾಗಿದೆ. ಭಾರತೀಯ ಸೇನೆಗೆ ಸೇರಲು ಜಾತಿಯ ಕಟ್ಟುಪಾಡುಗಳಿಲ್ಲ. ಶತ್ರುಗಳನ್ನು ಸದೆಬಡಿಯುವ ಸಂದರ್ಭ ಶತ್ರುಗಳು ಜಾತಿಯನ್ನು ಪರಿಗಣಿಸುವುದಿಲ್ಲ. ಸೈನ್ಯದಲ್ಲಿರುವ ಸೈನಿಕರನ್ನು ಜಾತಿಬೇಧ ಮಾಡದೆ ಗೌರವಿಸುವುದು ಭಾರತೀಯರ ಕರ್ತವ್ಯ. ಆದರೆ ಜಾತಿ ಆಧಾರದಲ್ಲಿ ಸೈನಿಕರನ್ನು ವಿಂಗಡಿಸಿ ಸೈನ್ಯದ ಬಲವನ್ನು ದುರ್ಬಲಗೊಳಿಸುವ ಪ್ರಯತ್ನ ದೇಶದ್ರೋಹದ ಚಟುವಟಿಕೆಯಾಗಿದೆ. ಈ ಕೂಡಲೇ ಪೊಲೀಸ್ ಇಲಾಖೆ ಫೇಸ್ ಬುಕ್ ಪೋಸ್ಟನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಕಮೀಷನರ್ ಸುರೇಶ್ ಅವರಿಗೆ ನೊಂದ ನಾಗರಿಕರ ಪರವಾಗಿ ಮುನ್ನೂರು ಗ್ರಾಮದ ರಾಜೇಶ್ ದೇಸೋಡಿ ಎಂಬವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

Exit mobile version