Site icon Ullalavani

ಮಜ್ಲಿಸುನ್ನೂರ್ ಮಹಾಸಂಗಮ ಪ್ರಚಾರಕ್ಕೆ ಚಾಲನೆ

UN NETWORKS

ಉಳ್ಳಾಲ : ಎಸ್‍ಕೆಎಸ್‍ಎಸ್‍ಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಮಜ್ಲಿಸ್‍ನ್ನೂರು ಮಹಾ ಸಂಗಮ ನಡೆಸಲು ಉದ್ದೇಶಿಸಿದ್ದು, ಕಾರ್ಯಕ್ರಮಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಫೆ. 19ರಂದು ನಡೆಯಲಿರುವ ಎಸ್‍ಕೆಎಸ್‍ಎಸ್‍ಎಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನ ಮತ ಪ್ರವಚನ ಹಾಗೂ ಮಜ್ಲಿಸುನ್ನೂರ್ ಮಹಾಸಂಗಮದ ವಾಹನ ಪ್ರಚಾರ ಜಾಥಾಕ್ಕೆ ಶನಿವಾರ ಉಳ್ಳಾಲ ದರ್ಗಾ ಚಾಲನೆ ನೀಡಿ ಮಾತನಾಡಿದರು.
ಸಯ್ಯದ್ ಹಾದಿ ತಂಙಳ್ ಮಾತನಾಡಿ ಮಹಾನ್ ವಿದ್ವಾಂಸರು ಸೇರಿ ನಡೆಸಲಿರುವ ಮಜ್ಲಿಸುನ್ನೂರು ಕಾರ್ಯಕ್ರಮವನ್ನು ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಯಶಸ್ಸುಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.

ಖಾಸಿಂ ದಾರಿಮಿ ಕಿನ್ಯ, ಅಮೀರ್ ತಂಙಳ್ ಕಿನ್ಯ, ಉಸ್ತಾದ್ ಹಾರೂನ್ ಅಹ್ಸನಿ, ದಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ತ್ವಾಹ, ಉಳ್ಳಾಲ ದರ್ಗಾ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಹಾಫಿಲ್ ಝೈನ್ ಸಖಾಫಿ, ಉಸ್ತಾದ್ ಹಮೀದ್ ಬಾಖವಿ ಬೈರಕಟ್ಟೆ, ಸಯ್ಯಿದ್ ಹಾದಿ ತಂಙಳ್, ಮಜೀದ್ ದಾರಿಮಿ, ಹನೀಫ್ ಪುತ್ತೂರು, ಉಮ್ಮರ್ ಎಸ್.ಕೆ., ಅಬೂಬಕ್ಕರ್ ಹಂಗ್ರಿ, ಹನೀಫ್ ಪೊಯ್ಯಗುಡ್ಡೆ, ಇಸ್ಮಾಯಿಲ್ ಕುಕ್ಕಾಜೆ, ಕಲಂದರ್ ಕುಕ್ಕಾಜೆ, ಸರ್ಫುದ್ದೀನ್ ಕುಕ್ಕಾಜೆ, ರಝಾಕ್ ಪೊಯ್ಯಗುಡ್ಡೆ, ಅಝೀಝ್ ಪೊಯ್ಯಗುಡ್ಡೆ ಹಾಗೂ ಅಬ್ದುಲ್ಲಾ ದಾರಿಮಿ ಪೊಯ್ಯಗದ್ದೆ ಉಪಸ್ಥಿತರಿದ್ದರು.

Exit mobile version