Site icon Ullalavani

ಕೇಂದ್ರ ಸರಕಾರ ರಾಜಕೀಯ ಬಿಟ್ಟು, ಸೈನಿಕರಿಗೆ ಸೌಲಭ್ಯ ಒದಗಿಸಲು ಆದ್ಯತೆ ಕೊಡಿ – ಆಶ್ರಫ್ ಕೆಸಿ ರೋಡ್

UN NETWORKS

ಮೊಂಟೆಪದವು: ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷ ಸೈನಿಕರ ಹೆಸರಿನಲ್ಲಿ ಸುಳ್ಳು ಹೇಳಿ ರಾಜಕಾರಣ ಮಾಡುವುದನ್ನು ಬಿಟ್ಟು ಸೈನಿಕರ ಸುರಕ್ಷತೆಗೆ ಅತ್ಯಾಧುನಿಕ ವಾಹನ, ಸುರಕ್ಷತಾ ಉಪಕರಣ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಟೀಂ ಇಂಡಿಯಾ ಸಂಘಟನೆಯ ಮುಖಂಡ ಅಶ್ರಫ್ ಕೆಸಿ ರೋಡ್ ಹೇಳಿದರು.

ಮೊಂಟೆಪದವು ಜಂಕ್ಷನ್‍ನಲ್ಲಿ ಟೀಂ ಇಂಡಿಯಾದ ವತಿಯಿಂದ ಹುತಾತ್ಮ ಯೋಧರಿಗೆ ನಮನ , ಪಾಕ್ ಭಯೋತ್ಪಾದಕರು ನಡೆಸಿದ ದುಷ್ಕೃತ್ಯದ ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿರುವ ಕೆಲವರಿಗೆ ದೇಶಕ್ಕಿಂತ ವ್ಯಕ್ತಿ ಮುಖ್ಯವಾಗಿರುವುದು ಖೇದಕರವಾಗಿದ್ದು ವ್ಯಕ್ತಿ ನಶ್ವರ, ದೇಶ ಅಮರ. ಹೀಗಾಗಿ ವ್ಯಕ್ತಿಗಿಂತ ದೇಶದ ಮೇಲೆ ನಮಗೆ ಪ್ರೀತಿ ಅಭಿಮಾನ ಮೂಡಬೇಕು ಎಂದರು.
ಬಳಿಕ ಅಗಲಿದ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ರಜಾಕ್ ಮೊಂಟೆಪದವು, ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್ ಮೋನು, ಫಯಾಜ್ ಮೊಂಟೆಪದವು, ಮಾಜಿ ಸದಸ್ಯ ಎಂ.ಎಂ. ಕುಂಞ, ಮಸೀದಿ ಕಾರ್ಯದರ್ಶಿ ಅಬ್ದುಲ್ ಖಾದರ್ , ಉದ್ಯಮಿ ಅಶ್ರಫ್ ಪದಿಂಜಾರ್, ಡಿವೈಎಫ್‍ಐ ಮೊಂಟೆಪದವು ಘಟಕದ ಅಧ್ಯಕ್ಷ ಸಿರಾಜ್ ಬಿ.ಎಂ., ಹಿದಾಯತ್, ಸಂಶುದ್ದೀನ್ ಯು.ಟಿ, ಆರಿಫ್ ಮೊಂಟೆಪದವು, ಶಾಫಿ ಬಿ.ಎಂ , ಮನ್ಸೂರ್ ತೋಟಾಲ್ ಹಾಗೂ ಮಂಗಳೂರು ವಿವಿ ವಿದ್ಯಾರ್ಥಿ ನಾಯಕ ಸಿರಾಜ್ ಉಪಸ್ಥಿತರಿದ್ದರು.

Exit mobile version