ಭಾರತೀಯ ಯೋಧರಿಗೆ ಶಕ್ತಿ ತುಂಬಲು ಕೆ.ಟಿ.ಸುವರ್ಣರಿಂದ ಗಣಪತಿ ಮಂದಿರದಲ್ಲಿ ಪೂಜೆ
UllalaVani
UN NETWORKS
ತೊಕ್ಕೊಟ್ಟು: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಭಾರತೀಯ ಯೋಧರ ಆತ್ಮಕ್ಕೆ ಶಾಂತಿಸಿಗಲಿ, ಅವರ ಅಗಲುವಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಭಾರತೀಯ ಯೋಧರಿಗೆ ಉಗ್ರಗಾಮಿಗಳನ್ನು ಮಟ್ಟಹಾಕಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ತೊಕ್ಕೊಟ್ಟಿನ ಶ್ರೀ ಗಣೇಶ ಮಂದಿರದಲ್ಲಿ ನಿನ್ನೆ ಮಾತೃಭೂಮಿ ಸೇವಾ ಪ್ರತಿಷ್ಠಾನದ ಅದ್ಯಕ್ಷ ಕೆ.ಟಿ.ಸುವರ್ಣರ ನೇತೃತ್ವದಲ್ಲಿ ಪೂಜಾ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರಾದ ಚಂದ್ರಹಾಸ್ ಅಡ್ಯಂತಾಯ, ಗಣೇಶ ಮಂದಿರದ ಅದ್ಯಕ್ಷ ಸದಾನಂದ ಗಣೇಶನಗರ, ಮಾಜಿ ಅದ್ಯಕ್ಷ ಟಿ.ರಾಮ, ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಪ್ರವೀಣ್.ಎಸ್.ಕುಂಪಲ, ತೊಕ್ಕೊಟ್ಟು ಹಿಂದೂ ಯುವ ಸೇನಾ ಅದ್ಯಕ್ಷ ದೀಕ್ಷಿತ್ ಪೂಜಾರಿ, ಜೈ ವೀರಮಾರುತಿ ವ್ಯಾಯಾಮ ಶಾಲಾ ಕಾರ್ಯದರ್ಶಿ ಪುರುಷೋತ್ತಮ ಕಲ್ಲಾಪು, ಕೌನ್ಸಿಲರ್ ನಮಿತಾ ಗಟ್ಟಿ, ವಿಶ್ವಹಿಂದೂ ಪರಿಷತ್ ನ ಪುರಂದರ ತೊಕ್ಕೊಟ್ಟು ಉಪಸ್ಥಿತರಿದ್ದರು.