UN NETWORKS
ಉಳ್ಳಾಲ: ಮಲ್ಪೆ ಬಂದರಿನಿಂದ ಹೊರಟು 64 ದಿನಗಳಾದರೂ ಪತ್ತೆಯಾಗದ ಏಳು ಮಂದಿ ಮೀನುಗಾರರು ಇದ್ದ ಸುವರ್ಣ ತ್ರಿಭುಜ ಬೋಟಿನ ನಿಖರತೆಯನ್ನು ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ತಂಡಗಳು ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ನೀಡುವಂತೆ ಕಡಲತೀರ ಉಳ್ಳಾಲದ ಪತ್ರಕರ್ತರ ತಂಡ ಪಣಂಬೂರು ಸಮುದ್ರ ತೀರದಲ್ಲಿ ಮರಳು ಕಲಾಕೃತಿ ರಚಿಸುವ ಮೂಲಕ ಜಾಗೃತಿ ಮೂಡಿಸಿತು.
ತಂಡದಲ್ಲಿ ವರದಿಗಾರರುಗಳಾದ ವಿಜಯಕರ್ನಾಟಕದ ಸತೀಶ್ ಪುಂಡಿಕಾಯಿ, ವಿ4 ನ ಆರೀಫ್ ಕಲ್ಕಟ್ಟ, ಪ್ರಜಾವಾಣಿ, ದಾಯ್ಜಿವಲ್ರ್ಡ್‍ನ ಮೋಹನ್ ಕುತ್ತಾರ್, ಸ್ಪಂಧನ ದ ಅಶ್ವಿನ್ ಕುತ್ತಾರ್, ಅಬ್ಬಕ್ಕ ಛಾನೆಲ್‍ನ ತೇಜೇಶ್ ಗಟ್ಟಿ , ಪೊಸಕುರಲ್‍ನ ಶಿವಶಂಕರ್ ಇದ್ದರು.