Site icon Ullalavani

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ

UN NETWORKS

ತಲಪಾಡಿ : ತಲಪಾಡಿ ಕೆ.ಸಿ. ರೋಡ್ ಅಲಂಕಾರಗುಡ್ಡೆ ಬಳಿಯ ಪೂಮಣ್ಣುವಿನ ಮನೆಯೊಂದರ ಕೆಲಸದಾಕೆ ದೆಹಲಿ ಮೂಲದ ರೇಶ್ಮಾ (17) ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಬುಧವಾರ ಸಂಜೆ ಘಟನೆ ಬೆಳಕಿಗೆ ಬಂದಿದ್ದು ಸ್ಥಳೀಯರು ರೇಶ್ಮಾ ಸಾವಿನ ಬಗ್ಗೆ ಕೊಲೆ ಶಂಕೆ ವ್ಯಕ್ತ ಪಡಿಸಿ ಪೊಲೀಸರ ಮೃತದೇಹ ತೋರಿಸಲು ಅವಕಾಶ ಕೊಡಲಿಲ್ಲ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಫೊರೋನ್ಸಿಕ್ ತಜ್ಞ ಡಾ. ಮಹಾಬಲೇಶ್ ಶೆಟ್ಟಿ ಅವರು ರೇಶ್ಮಾ ಸಾವು ಆತ್ಮಹತ್ಯೆ ಎಂದು ದೃಢಪಡಿಸಿದ ಬಳಿಕ ರಾತ್ರಿ ಸುಮಾರು 9.00ರ ಹೊತ್ತಿಗೆ ಹೊತ್ತಿನಲ್ಲಿ ಶವ ತೆಗೆಯಲಾಯಿತು.ಮನೆಯ ಮಾಲೀಕ ಮಹಮ್ಮದ್ ವಿದೇಶದಲ್ಲಿದ್ದು ಮನೆಯಲ್ಲಿ ಸಹೋದರ ಸಂಬಂಧಿ ಹಮೀದ್ ಕುಟುಂಬ ವಾಸವಿದ್ದಾರೆ. ಬುಧವಾರ ಮಧ್ಯಾಹ್ನ ಮನೆಮಂದಿ ಹೊರಗೆ ಹೋಗಿದ್ದಾಗ ರೇಶ್ಮಾ ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದೆ. ಒಂದು ವರ್ಷ ಒಂಬತ್ತು ತಿಂಗಳಿಂದ ಮನೆ ಕೆಲಸ ಮಾಡುತ್ತಿದ್ದ ರೇಶ್ಮಾಳ ಅಕ್ಕ ಕೂಡಾ ಇದೇ ಸಂಬಂಧಿಕರ ಮನೆಯಲ್ಲಿ ಕೆಲಸಕ್ಕಿದ್ದು ಆಕೆಗೆ ಅವರು ಮದುವೆ ಮಾಡಿ ಕೊಟ್ಟಿದ್ದರು ಎನ್ನಲಾಗಿದೆ. ಹಾಗಾಗಿ ಮನೆಕೆಲಸಕ್ಕೆ ತಂಗಿಯನ್ನು ದೆಹಲಿಯಿಂದ ಕರೆಸಿಕೊಂಡಿದ್ದಳು ಎನ್ನಲಾಗಿದೆ. ದೆಹಲಿಯ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು ಗುರುವಾರ ತಲುಪಲಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version