Site icon Ullalavani

ಮಂಗಳೂರು ವಿಧಾನ ಸಭಾ ಕ್ಷೇತ್ರ 20 ಗ್ರಾಮ ಪಂಚಾಯತ್ ಚುನಾವಣೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 22 ಗ್ರಾಮ ಪಂಚಾಯತ್‍ನಲ್ಲಿ ಎರಡು ಗ್ರಾಮ ಪಂಚಾಯತ್‍ಗಳನ್ನು ಹೊರತು ಪಡಿಸಿ 20 ಗ್ರಾಮ ಪಂಚಾಯತ್ ಚುನಾವಣೆ ಶುಕ್ರವಾರ ನಡೆದಿದ್ದು ಒಟ್ಟು 394ಸ್ಥಾನದಲ್ಲಿ 33 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ 361 ಸ್ಥಾನಗಳಿಗೆ 908 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಸಾಂದರ್ಭಿಕ ಚಿತ್ರ

ಕ್ಷೇತ್ರದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರದಲ್ಲಿ 61 ಸ್ಥಾನಗಳಲ್ಲಿ 18 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 43 ಸ್ಥಾನಕ್ಕೆ 95 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಉಳಿದಂತೆ ಅಂಬ್ಲಮೊಗರು ಗ್ರಾಮ ಪಂಚಾಯತ್‍ನಲ್ಲಿ 13 ಸ್ಥಾನಗಳಿಗೆ 39 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಬೆಳ್ಮ ಗ್ರಾಮ ಪಂಚಾಯತ್‍ನಲ್ಲಿ 17 ಸ್ಥಾನಗಳಿದ್ದು, ಒಂದು ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು, 16 ಸ್ಥಾನಗಳಿಗೆ 44 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಬೋಳಿಯಾರ್ ಗ್ರಾಮ ಪಂಚಾಯತ್‍ನಲ್ಲಿ 15ಸ್ಥಾನಗಳಿಗೆ 53 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದು, ಹರೇಕಳ ಗ್ರಾಮ ಪಂಚಾಯತ್‍ಗೆ 18 ಸ್ಥಾನಗಳಲ್ಲಿ ಒಂದು ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು, 17 ಸ್ಥಾನಗಳಿಗೆ 42 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕಿನ್ಯ ಗ್ರಾಮ ಪಂಚಾಯತ್‍ನಲ್ಲಿ 12 ಸ್ಥಾನಗಳಲ್ಲಿ ಒಂದು ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು, 11 ಸ್ಥಾನಗಳಿಗೆ 26 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಕೊಣಾಜೆ ಗ್ರಾಮ ಪಂಚಾಯತ್‍ನಲ್ಲಿ 29 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು,28 ಸ್ಥಾನಗಳಿಗೆ 70 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಮಂಜನಾಡಿ ಗ್ರಾಮ ಪಂಚಾಯತ್‍ನಲ್ಲಿ 26 ಸ್ಥಾನಗಳಲ್ಲಿ 4 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದರೆ 22 ಸ್ಥಾನಗಳಿಗೆ 46 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುನ್ನೂರು ಗ್ರಾಮ ಪಂಚಾಯತ್‍ನಲ್ಲಿ 23 ಸ್ಥಾನಗಳಲ್ಲಿ ಒಂದು ಅವಿರೋಧವಾಗಿ ಆಯ್ಕೆಯಾಗಿದ್ದು, 22 ಸ್ಥಾನಕ್ಕೆ 58 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾವೂರು ಗ್ರಾಮ ಪಂಚಾಯತ್‍ನಲ್ಲಿ 15 ಸ್ಥಾನಕ್ಕೆ 41ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಲಪಾಡಿ ಗ್ರಾಮ ಪಂಚಾಯತ್‍ನಲ್ಲಿ 24 ಸ್ಥಾನಗಳ ಪೈಕಿ ಒಂದು ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು 23 ಸ್ಥಾನಗಳಿಗೆ 58 ಸ್ಪರ್ಧಾಳುಗಳು ಕಣದಲ್ಲಿದ್ದಾರೆ.
ಕ್ಷೇತ್ರದ ಬಂಟ್ವಾಳ ತಾಲೂಕು ವ್ಯಾಪ್ತಿಯ ಪಜೀರು ಗ್ರಾಮ ಪಂಚಾಯತ್‍ನಲ್ಲಿ 17 ಸ್ಥಾನಗಳಲ್ಲಿ ಒಂದು ಅವಿರೋಧವಾಗಿ ಆಯ್ಕೆಯಾಗಿದ್ದು, 16 ಸ್ಥಾನಕ್ಕೆ 35 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಇರಾ ಗ್ರಾಮ ಪಂಚಾಯತ್‍ನಲ್ಲಿ 19 ಸ್ಥಾನಗಳಿಗೆ 43 ಸ್ಪರ್ದಾಳುಗಳು ಕಣದಲ್ಲಿದ್ದು, ಕೊಡ್ಮಾಣ್ (ಮೇರೆ ಮಜಲು) ಗ್ರಾಮ ಪಂಚಾಯತ್‍ನಲ್ಲಿ 12 ಸ್ಥಾನಗಳಲ್ಲಿ ಒಂದು ಅವಿರೋಧವಾಗಿ ಆಯ್ಕೆಯಾಗಿದ್ದು, 11 ಸ್ಥಾನಗಳಿಗೆ 22 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ತುಂಬೆ ಗ್ರಾಮ ಪಂಚಾಯತ್‍ನಲ್ಲಿ 16 ಸ್ಥಾನಗಳಲ್ಲಿ ಒಂದು ಅವಿರೋಧವಾಗಿ ಆಯ್ಕೆಯಾಗಿದ್ದು, 15 ಸ್ಥಾನಗಳಿಗೆ 38 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಸಜಿಪನಡು ಗ್ರಾಮ ಪಂಚಾಯತ್‍ನಲ್ಲಿ 15 ಸ್ಥಾನಗಳಿಗೆ 44 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಸಜಿಪಪಡು(ಚೇಳೂರು) ಗ್ರಾಮ ಪಂಚಾಯತ್‍ನಲ್ಲಿ 8 ಸ್ಥಾನಗಳಲ್ಲಿ ಒಂದು ಅವಿರೋಧ ಆಯ್ಕೆಯಾಗಿದ್ದು, 7ಸ್ಥಾನಗಳಿಗೆ 15 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ.
ಕುರ್ನಾಡು ಗ್ರಾಮ ಪಂಚಾಯತ್‍ನಲ್ಲಿ 8 ಸ್ಥಾನಗಳಲ್ಲಿ ಒಂದು ಅವಿರೋಧ ಆಯ್ಕೆಯಾಗಿದ್ದು, 7 ಸ್ತಾನಕ್ಕೆ 16 ಸ್ಪರ್ದಾಳುಗಳು ಕಣದಲ್ಲಿದ್ದಾರೆ.
ನರಿಂಗಾನ ಗ್ರಾಮ ಪಂಚಾಯತ್‍ನಲ್ಲಿ 17 ಸ್ಥಾನಗಳಿಗೆ 56 ಅಭ್ಯರ್ಥಿಗಳು ಕಣದಲ್ಲಿದ್ದು, ಬಾಳಪುಣಿ(ಕೈರಂಗಳ) ಗ್ರಾಮ ಪಂಚಾಯತ್‍ನಲ್ಲಿ 29 ಸ್ಥಾನಗಳಿಗೆ 68 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕ್ಷೇತ್ರದ ಕೋಟೆಕಾರು ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದು, ಪುದು ಗ್ರಾಮ ಪಂಚಾಯತ್‍ಗೆ ಚುನಾವಣೆ ಇಲ್ಲ.
ಕುರ್ನಾಡು ಗ್ರಾಮ ಪಂಚಾಯತ್ ಇಬ್ಬಾಗ : ಕುರ್ನಾಡು ಗ್ರಾಮ ಪಂಚಾಯತ್ ಈ ಹಿಂದ ಎ15 ಸದಸ್ಯರಿದ್ದು, ಈ ಬಾರಿಯ ಚುನಾವಣೆಯಲ್ಲಿ ಕುರ್ನಾಡು ಗ್ರಾಮ ಪಂಚಾಯತನ್ನು ಎರಡು ಗ್ರಾಮ ಪಂಚಾಯತ್ ಆಗಿ ಪುನರ್‍ವಿಂಗಡಿಸಿದ್ದು, ನೂತನ ಗ್ರಾಮ ಪಂಚಾಯತ್ ಆಗಿ ಸಜಿಪಪಡು(ಚೇಳೂರು) ಗ್ರಾಮ ಪಂಚಾಯತ್ ಈ ಬಾರಿ ಪ್ರಥಮ ಬಾರಿಗೆ ಚುನಾವಣೆ ಎದುರಿಸಲಿದ್ದು, ಕೋಟೆಕಣಿಯಲ್ಲಿ ನೂತನ ಗ್ರಾಮ ಪಂಚಾಯತ್ ತಲೆ ಎತ್ತಲಿದೆ.

ಸೋಮೇಶ್ವರ ಗ್ರಾಮ ಪಂಚಾಯತ್‍ನಲ್ಲಿ 5 ವಾರ್ಡ್‍ಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಚುನಾವಣೆಯಿಂದ ಮುಕ್ತವಾಗಿದೆ.
ಬೋಳಿಯಾರ್ ಜಾರದಗುಡ್ಡೆಯಲ್ಲಿ ಸಚಿವ ಖಾದರ್ ಮತದಾನ : ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬೋಳಿಯಾರ್ ಗ್ರಾಮದ ರಂತಡ್ಕದ ಜಾರದಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಸಿದರು. ಬಳಿಕ ತನ್ನ ಅಮ್ಮೆಂಬಳದಲ್ಲಿರುವ ತಮ್ಮ ಹಿರಿಯ ಮನೆಗೆ ಭೇಟಿ ನೀಡಿ ಕ್ಷೇತ್ರದಾದ್ಯಂತ ಮತದಾನ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದರು.

Exit mobile version