Site icon Ullalavani

ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಗೆ ಶುಭ ಕೆ.ಎಚ್.ಆಯ್ಕೆ

UN NETWORKS

ಮುಡಿಪು : ಶುಭ ಕೆ.ಎಚ್. ಅವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ತ್ರಿಪಲ್ ಜಂಪ್‍ನಲ್ಲಿ ಬೆಳ್ಳಿ ಪದಕ, ಲಾಂಗ್ ಜಂಪ್‍ನಲ್ಲಿ ಚತುರ್ಥ ಸ್ಥಾನ, 4×100ಮೀಟರ್ ರಿಲೇ ಹಾಗೂ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ಇವರು ಮಲೇಶಿಯಾದಲ್ಲಿ ನಡೆಯಲಿರುವ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ಪ್ರಶಾಂತ್ ನುಳ್ಳಿಪಾಡಿಯವರ ಪತ್ನಿಯಾಗಿರುವ ಇವರು ಜೆಪ್ಪು ಮಾರ್ಕೆಟ್ ಮಂಗಳೂರಿನ ನಿವಾಸಿಯಾಗಿರುತ್ತಾರೆ. ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತಿದ್ದಾರೆ.

Exit mobile version