Site icon Ullalavani

ನಿಧನ : ವಿಠಲ ಸುವರ್ಣ ಗುರಿಕಾರ

UN NETWORKS

ಉಳ್ಳಾಲ: ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಹಿರಿಯ ಗುರಿಕಾರ, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ , ಮೊಗವೀರ ಮುಂದಾಳು ಉಳ್ಳಾಲ ಮೊಗವೀರಪಟ್ಣ ನಿವಾಸಿ ವಿಠಲ ಸುವರ್ಣ ಗುರಿಕಾರ(84) ಫೆ. 10ರಂದು ರವಿವಾರ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಉಳ್ಳಾಲ ಮೊಗವೀರ ಸಂಘ, ಹದಿನಾಲ್ಕು ಪಟ್ಣ ಮೊಗವೀರ ಸಂಯುಕ್ತ ಸಭಾ ಮಂಗಳೂರು ಇದರ ಅಧ್ಯಕ್ಷರಾಗಿ, ಶ್ರೀ ವ್ಯಾಘ್ರ ಚಾಮುಂಡೇಶ್ವರೀ ಎಜ್ಯುಕೇಶನ್ ಟ್ರಸ್ಟ್‍ನ ಮ್ಯಾನೆಜಿಂಗ್ ಟ್ರಸ್ಟಿಯಾಗಿ, ಮೊಗವೀರ ಹಳೇ ವಿದ್ಯಾರ್ಥಿ ಸಂಘ ಮತ್ತು ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನೊಳಗೊಂಡ ಉಚ್ಚಿಲ ಮೊಗವೀರ ಮಹಾಜನ ಸಭಾದ ಆಡಳಿತ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರು, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಕಕ್ಷರಾಗಿ, ಕುಳಾಯಿ ಸುವರ್ಣ ಮೂಲಸ್ಥಾನದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Exit mobile version