Site icon Ullalavani

ದೇರಳಕಟ್ಟೆ : ಬೃಹತ್ ರಕ್ತದಾನ ಶಿಬಿರ

UN NETWORKS

ದೇರಳಕಟ್ಟೆ: ಬದ್ರಿಯ ಜುಮಾಮಸೀದಿ ದೇರಳಕಟ್ಟೆ, ಹಯಾತುಲ್ ಇಸ್ಲಾಂ ಮದರಸದ ಹಳೆ ವಿದ್ಯಾರ್ಥಿ ಸಂಘದ ತೃತೀಯ ವಾರ್ಷಿಕ ದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಯೆನೆಪೋಯ ಆಸ್ಪತ್ರೆ ಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಬದ್ರಿಯ ಜುಮಾಮಸೀದಿ ಖತೀಬ್ ಮಹಮ್ಮದ್ ಶರೀಫ್ ಅರ್ಶದಿ ಕಾರ್ಯ ಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿ, ದಾನ ಧರ್ಮಕ್ಕೆ ಇಸ್ಲಾಂ ಧರ್ಮ ವಿಶೇಷವಾದ ಮಹತ್ವ ನೀಡಿದೆ. ರಕ್ತದ ಅಗತ್ಯ ಬಂದಾಗ ರಕ್ತದಾನ ಮಾಡಿ ಪರಸ್ಪರ ಸಹಾಯ ಮಾಡುವುದು ಒಂದು ಉತ್ತಮ ಕಾರ್ಯ ಎಂದು ಹೇಳಿದರು.ಕೊಣಾಜೆ ಪೋಲಿಸ್ ಠಾಣಾ ನೀರಿಕ್ಷಕ ರವಿ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇಶದ ಭವಿಷ್ಯ ಯುವ ಸಮೂಹ ರಕ್ತದಾನದಂತಹ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿದಾಗ. ಮುಂದೆ ಉತ್ತಮ ಸಮಾಜವಾಗಿ ನಿರ್ಮಾಣವಾಗುವಲ್ಲಿ ಸಂಶಯವಿಲ್ಲ. ಯುವ ಸಮೂಹ ದಾರಿಪದಂತೆ ನೋಡಿಗೊಳ್ಳುದ್ದು ಪೋಷಕರ ಜವಬ್ದಾರಿಯಾಗಿ ಎಂದು ಹೇಳಿದರು.ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್ ಲೈನ್ ನ ಕಾರ್ಯನಿರ್ವಾಹಕರಾದ ಫೈಝಾಲ್ ಮಂಚಿ ಮತ್ತು ಶಾಫಿ ಕಿನ್ಯ ಹಾಗೂ ಸಮಾಜ ಸೇವಕರಾದ ಫಾರೂಕ್ ರೆಂಜಾಡಿ, ಅರೀಫ್ ಹುಸೈನ್ ಅಹ್ಮದ್ ರವರನ್ನು ಸನ್ಮಾನಿಸಲಾಯಿತು.

ಬದ್ರಿಯ ಜುಮಾಮಸೀದಿ ಗೌರವಾಧ್ಯಕ್ಷ ಮೊಹಿಯ್ಯಿದ್ದೀನ್ ಕುಂಞ, ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ದೇರಳಕಟ್ಟೆ ಎಜ್ಯುಕೇಶನ್, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ಅಬೂಬಕ್ಕರ್ ಹಾಜಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅಬ್ದುಲ್ ರಹ್ಮಾನ್ ಶೇಟ್, ದೇರಳಕಟ್ಟೆ ರಹ್ಮಾನಿಯ ಜುಮಾ ಮಸೀದಿ ಖತೀಬ್ ರಿಝಾಝ್ ನದ್ವಿ, ಲೇಖಕ ಇಸ್ಮತ್ ಪಜೀರ್, ಬೆಳ್ಮೆ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಇಲ್ಯಾಸ್ ಹಾಜಿ, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಡಿ.ಎಂ ಮುಹಮ್ಮದ್ ಪುಷ್ಠಿ, ಉದ್ಯಮಿ ಎಚ್.ಎಚ್ ಮುಹಮ್ಮದ್ ಶಫೀಕ್, ಬೆಳ್ಮ ಗ್ರಾ.ಪಂ ಸದಸ್ಯ ಕಬೀರ್.ಡಿ, ಯೆನೆಪೋಯ ಆಸ್ಪತ್ರೆಯ ರಕ್ತ ಸಂಗ್ರಹ ವಿಭಾಗದ ಮುಖ್ಯ ಅಧಿಕಾರಿ ಡಾ.ಶರೀಫ್, ಬದ್ಯಾರ್ ಫಾರೂಕ್ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಹಾಜಿ, ರೆಂಜಾಡಿ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹನೀಫ್, ಎಸ್ ವೈಎಸ್ ದೇರಳಕಟ್ಟೆ ಸೆಂಟರ್ ಆಧ್ಯಕ್ಷ ಎಷ್ಯನ್ ಬಾವಾ ಹಾಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಾಸರ್, ಮಾಜಿ ಅಧ್ಯಕ್ಷ ರಶೀದ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸ್ಥಾಪಕಾಧ್ಯಕ್ಷ ನಿಝಾರ್ ಉಳ್ಳಾಲ್, ಸದಸ್ಯ ನೌಷಾದ್ ಕುಕ್ಕಾಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಕ್ತದಾನಿಗಳಿಂದ 69 ಯುನಿಟ್ ರಕ್ತ ಸಂಗ್ರಹಿಸಲಾಯಿತು.ಹಳೆ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಡಿ.ಎ ಅಶ್ರಫ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಶಿಹಾಬುದ್ದೀನ್ ವಂದಿಸಿದರು. ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿ ಸ್ವಾಲಿ ಕಾರ್ಯಕ್ರಮ ನಿರೂಪಿಸಿದರು

Exit mobile version