ತೊಕ್ಕೊಟ್ಟು: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ ಕೆಟಿಎಂ ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು.
ವೃತ್ತಿಪರ ಸಾಹಸಿ ಬೈಕ್ ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್‍ಗಳನ್ನು ಪ್ರದರ್ಶಿಸಿದರು.ತೊಕ್ಕೊಟ್ಟಿವಿನ ಯೂನಿಟಿ ಹಾಲ್ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತೆ ಕೆಟಿಎಂಡ್ಯೂಕ್ ಬೈಕ್‍ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು.ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿತ್ತು.“ಕೆಟಿಎಂ ಬ್ರಾಂಡ್ ಅಧಿಕ ಸಾಮಥ್ರ್ಯದ ರೇಸಿಂಗ್ ಬೈಕ್‍ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್‍ಗಳು ಚಾಲಕರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ” ಎಂದು ಬಜಾಜ್ ಆಟೋ ಲಿಮಿಟೆಡ್‍ನ ಪ್ರೊ ಬೈಕಿಂಗ್ ವಿಭಾಗದ ಅಧ್ಯಕ್ಷರಾದ ಅಮಿತ್ ನಂದಿ ತಿಳಿಸಿದರು.
ಇದುವರೆಗೆ ಶಿವಮೊಗ್ಗ, ಕಲಬುರಗಿ, ಹುಬ್ಬಳ್ಳಿ, ಹಾಸನ, ಧಾರವಾಡ, ಚಿಕ್ಕಮಗಳೂರು, ಗೋಕಾಕ, ಹೊಸಪೇಟೆ, ಮಂಗಳೂರು, ಉಡುಪಿ, ವಿಜಯಪುರ, ಕೋಲಾರ, ಚೆನ್ನೈ, ಇಂದೋರ್, ಕಂಚಿಪುರ, ಸೇರಿದಂತೆದೇಶದ ವಿವಿಧ ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನವನ್ನುಆಯೋಜಿಸಲಾಗಿತ್ತು.