ಜೆ.ಎಸ್.ಟಿ ಪ್ರವಾಸ ಫೆಲೋಶಿಪ್‍ನಲ್ಲಿ ನಿಟ್ಟೆ ವಿವಿ ವೈದ್ಯರ ತಂಡ ಜಪಾನ್‍ಗೆ
UllalaVani
UN NETWORKS
ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಸತತ 7ನೇ ಬಾರಿಗೆ ಜಪಾನಿನ ಮಿಯಾಝಕಿ ವಿಶ್ವವಿದ್ಯಾನಿಲಯದ ಸಕುರಾ ವಿನಿಮಯ ಕಾರ್ಯಕ್ರಮದಡಿ ಪ್ರಧಾನ ಸಂಶೋಧಕ ಪ್ರೊ| ಫುರುಕುವ ಸೈಶಿ ಮತ್ತು ಸಹಾಯಕ ಸಂಶೋಧಕ ಡಾ| ಹರೀಶ್ ಮುಖ್ಯಸ್ಥ ಅವರ ನೇತೃತ್ವದಲ್ಲಿ ನಡೆಸಲಾಗುವ ಜೆ.ಎಸ್.ಟಿ ಪ್ರವಾಸ ಫೆಲೋಶಿಪ್ಪನ್ನು ಪಡೆದುಕೊಂಡಿದೆ.
ನಿಟ್ಟೆ ವಿಶ್ವವಿದ್ಯಾನಿಲಯದಿಂದ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಅವರ ನೇತೃತ್ವದಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿಯ 11 ವೈದ್ಯರುಗಳ ತಂಡ ಜಪಾನಿನ ಮಿಯಾಝಾಕಿ ವಿಶ್ವವಿದ್ಯಾಲಯಕ್ಕೆ ಫೆ.11ರಿಂದ 19ರವರೆಗೆ ಸಕುರಾ ವೈಜ್ಞಾನಿಕ ಯೋಜನೆಯಡಿ ಭೇಟಿ ನೀಡಲಿದ್ದು, ಈ ಭೇಟಿಯು ಜಪಾನ್ ಮತ್ತು ಏಷ್ಯಾದ ಇತರ ದೇಶಗಳ ನಡುವೆ ಜೆ.ಎಸ್.ಟಿ ಪ್ರಾಯೋಜಿತ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ವಿನಿಮಯ ಮತ್ತು ಯುವ ಪ್ರತಿಭೆಗಳ ವಿನಿಮಯದ ವೃದ್ಧಿಗಾಗಿ ಜಪಾನ್ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯು ನಡೆಸುತ್ತಿರುವ ಪ್ರಯತ್ನದ ಭಾಗವಾಗಿದೆ. ಈ ವಿನಿಯಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಉತ್ತಮ ಬಾಂಧವ್ಯವನ್ನು ವೃದ್ಧಿಸುವ ಆಶಯವನ್ನು ವ್ಯಕ್ತಪಡಿಸಿದೆ. ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿಯ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ| ತನ್ಮಯ್ ಭಟ್,ಸ್ನಾತಕೋತ್ತರ ವಿದ್ಯಾರ್ಥಿ ಡಾ| ದಿವ್ಯಕಿರಣ್ ಶಿವಕುಮಾರ್, ಚರ್ಮಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ| ಶ್ರೀಚರಿತ್ ಶೆಟ್ಟಿ, ಮೆಡಿಕಲ್ ಆಂಕಾಲಜಿ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ|ವಿಜಿತ್ ವಿಠ್ಠಲ ಶೆಟ್ಟಿ, ಶಿಶು ವೈದ್ಯ ವಿಭಾಗದ ಸಹ ಪ್ರಾದ್ಯಾಪಕಿ ಡಾ| ಸೀಮಾ ಪವಮಾನ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿ ಡಾ| ಅಶ್ವಿ ರಾಮಕೃಷ್ಣನ್, ವಿಕಿರಣಶಾಸ್ತ್ರ ವಿಭಾಗದ ಡಾ| ವೆಂಕಟ ತೇಜಸ್ವಿ,ಸ್ತ್ರೀರೋಗ ವಿಭಾಗದ ಡಾ| ಝುಲ್ಪಿಯ ಶಬ್‍ನಮ್, ಮನಶಾಸ್ತ್ರ ವಿಭಾಗದ ಡಾ| ಪ್ರಭಾತ್ ಗುಜ್ಜಾಡಿ ಮತ್ತು ಸರ್ಜರಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ| ರಕ್ಷಾ ರಮೇಶ್ ತಂಡದಲ್ಲಿದ್ದಾರೆ.