UN NETWORKS
ಪಾವೂರು: ದುಷ್ಕರ್ಮಿಗಳಿಂದ ಇತ್ತೀಚೆಗೆ ಹಾನಿಗೀಡಾದ ಪಾವೂರು ಉಳಿಯದ ಸೇತುವೆ ದುರಸ್ತಿಗೆ ಗುರುವಾರ ಪಾವೂರು ಗ್ರಾಮ ಯುವ ಕಾಂಗ್ರೆಸ್ ಸಮಿತಿಯು ನೆರವು ನೀಡಿತು. ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರನ್ನು ಒಳಗೊಂಡ ನಿಯೋಗವು ಘಟನೆ ನಡೆದ ಸ್ಥಳಕ್ಕೆ ಭೇಟಿ ಹಲಗೆಯನ್ನು ದೋಣಿ ಮೂಲಕ ಸಾಗಿಸಿತಲ್ಲದೆ, ದುರಸ್ತಿ ಕಾರ್ಯದಲ್ಲೂ ತೊಡಗಿಸಿಕೊಂಡಿತು.
ಈ ಸಂದರ್ಭ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಗ್ರಾಪಂ ಅಧ್ಯಕ್ಷ ಪಿರೋಝ್ ಮಲಾರ್, ಸದಸ್ಯರಾದ ವಿವೇಕ್ ರೈ, ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಬುಸಾಲಿ ಗಾಡಿಗದ್ದೆ, ಯುವ ಕಾಂಗ್ರೆಸ್‌ನ ರಿಯಾಝ್ ಗಾಡಿಗದ್ದೆ, ದಾವೂದ್ ಬಾಷಾ, ಪ್ರದೀಪ್ ಡಿಸೋಜ, ಇರ್ಫಾನ್ ಮಲಾರ್, ನೌಶಾದ್ ಊಲ್‌ಮಾರ್ಟ್, ಜೆರಾಲ್ಡ್ ಬ್ರಾಕ್ಸೃ್, ಜಾಫರ್, ಇಮ್ರಾನ್, ರಿಯಾಝ್, ಇಮ್ತಿಯಾಝ್, ನೌಫಲ್, ನೌಝೀಲ್, ನಾಝಿಮ್ ಟಿ.ಎಚ್, ಅನ್ವರ್, ಇಸ್ತಾರ್, ರಿಝ್ವಾನ್, ನಿಯಾಝ್, ಹನೀಫ್ ಕುಂಜತ್ತೂರು, ನಿಸಾರ್, ಶಬೀರ್, ಉಳಿಯ ಇನ್‌ಫೆಂಟ್ ಜೀಸಸ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.