ದೇರಳಕಟ್ಟೆ: ಯೆನೆಪೋಯ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ದಿನ- 2019
UllalaVani
UN NETWORKS
ದೇರಳಕಟ್ಟೆ: ದೇರಳಕಟ್ಟೆಯ ಯೆನೆಪೋಯ ಪರಿಗಣಿಸಲಾದ ವಿಶ್ವವಿದ್ಯಾಲಯದ ಯೆನೆಪೋಯ ನರ್ಸಿಂಗ್ ಕಾಲೇಜಿನ ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸಾ ಶುಶ್ರೂಷಾ ವಿಭಾಗ ಹಾಗೂ ಪ್ರಸೂತಿ ಹಾಗೂ ಸ್ತ್ರೀ ರೋಗ ಶುಶ್ರೂಷಾ ವಿಭಾಗದ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ವಿಚಾರಗೋಷ್ಠಿಯನ್ನು ಸೋಮವಾರ ಆಯೋಜಿಸಲಾಯಿತು.
ಯೇನೆಪೊಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಂಗಾಧರ ಸೋಮಯಾಜಿ, ಯೇನೆಪೊಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಲೀನಾ ಕೆ.ಸಿ. , .ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸ ಶುಶ್ರೂಷಾ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್ ಜವದಗಿ, ಪ್ರಸೂತಿ ಹಾಗು ಸ್ತ್ರೀರೋಗ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಜನೆಟ್ ಮಿರಾಂಡಾ ಕಾರ್ಯಕ್ರಮ ಉದ್ಘಾಟಿಸಿದರು.ಗಿರೀಶ್ ಜಿ ಆರ್, ಜನೆಟ್ ಮಿರಾಂಡಾ ಹಾಗು ಡಾ. ಗುರುಪ್ರಸಾದ್ ಭಟ್ ಸಂಪನ್ಮೂಲ ವ್ಯಕ್ತಿ ಸ್ಥಾನದಿಂದ ಅರ್ಬುದ ರೋಗ ಹಾಗೂ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವಿಕೆ ಹಾಗೂ ದಾದಿಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಸಂತೋಷ್ ಸ್ವಾಗತಿಸಿದರು. ವಿನಿತಾ ಡಿಸೋಜ ವಂದಿಸಿದರು.