Site icon Ullalavani

ಮುಡಿಪುವಿನಲ್ಲಿ ಸರಣಿ ಅಪಘಾತ

UN NETWORKS

ಮುಡಿಪು: ಮುಡಿಪು ಸಮೀಪದ ಸಾಂಬಾರ್‍ತೋಟ ಬಳಿ ಬಸ್ಸೊಂದು ಬ್ರೇಕ್ ಪೈಲ್ ಆಗಿ ಕಾರು, ಬಸ್ಸು ಹಾಗೂ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಭವಿಸಿದೆ.

ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ಬಿ.ಸಿ.ರೋಡ್‍ಗೆ ಸಂಚರಿಸುವ ಬಸ್ಸೊಂದು ಸಾಂಬಾರ್‍ತೋಟ ಬಳಿ ಬ್ರೇಕ್ ನಿಯಂತ್ರಣ ತಪ್ಪಿದ ಪರಿಣಾಮ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್‍ಗೆ ಹಾಗೂ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಯ ಎಡಬದಿಗೆ ಸಂಚರಿಸಿ ರಸ್ತೆಯ ಬದಿಯ ವಿದ್ಯುತ್ ಕಂಬಗಳಿಗೂ ಡಿಕ್ಕಿ ಹೊಡೆದಿದೆ. ಘಟನೆಯಿಂದ ವಿದ್ಯುತ್ ಕಂಬಗಳು ಮುರಿದಿದ್ದು ಬಸ್ಸು ಹಾಗೂ ಕಾರು ಜಖಂಗೊಂಡಿದೆ.

Exit mobile version